ಹಾಯ್ಕುಗಳು
ಹಾಯ್ಕುಗಳು
*ಜೀವನ*
ನಗು ಜೀವನ
ನಗುತ ಬಾಳಿದರೆ
ಸುಖ ಪಯಣ
*ಅಭಯ ಹಸ್ತ*
ಧರ್ಮ ಮಾರ್ಗದಿ
ನುಡಿದು ನಡೆದರೆ
ಇಲ್ಲವು ಭಯ!
*ಶಕ್ತಿ*
ಮಾತೆಯ ಮಾತು
ಮೀರಿ ನಡೆಯದಿರು
ಅದೇ ಧೀಶಕ್ತಿ
*ಪ್ರಯತ್ನ*
ಅಂಜದೆಂದೆಂದೂ
ಮುಂದಡಿಯಿಟ್ಟು ಸಾಗು
ಪಡೆವೆ ಫಲ!
*ಬಿಡುಗಡೆ*
ಮೋಹ ತೆಕ್ಕೆಯ
ಬಂಧಿ ನಾ ಅರಸಿಹೆ
ಬಿಡುಗಡೆಯ.