ಪ್ರಕೃತಿ
ಪ್ರಕೃತಿ

1 min

531
ಸುತ್ತಲೂ ಹಸಿರು ಕಾನು
ನಡುವೆ ಬಿರಿದ ಬಾನು
ಮನ ತೇಲಿದೆ ಅಂಬರದ ಬಿಲ್ಲೇರಿ
ಸಗ್ಗ ಕಂಡೆನು ಇಲ್ಲೇ
ಬನ್ನಿ ನೇಹಿಗರೇ ಹಸುರುಡೆಯ
ವನರಾಜಿಯಾ ಮಡಿಲಿಗೆ
ಎದೆ ಝಲ್ಲೆನಿಸುವ ರುದ್ರ ರಮಣೀಯ ದೃಶ್ಯ
ಜಲಲ ಜಲಧಾರೆಯ ಭೋರ್ಗರೆತ
ರಾಜಾ ರಾಣಿ ಮೈದುಂಬಿರಲು
ಮನಮೋಹಕ ಬೆಳ್ಳಿ ಬೆಡಗು
ಸಗ್ಗವಿಳಿದಿದೆ ನಂದನವಾಗಿ
ಸಲಿಲಧಾರೆಗೆ ಈ ಧರೆಯಾದಳು ವಸುಂಧರೆ
ರೈತನ ಮೊಗದಿ ಹೊಸ ಸಡಗರ
ಹಸಿರು ಹೊನ್ನ ಬೆಳೆ ಜೀವನದಿ ಕಳೆ
ಇಳೆ ಬಾಳೆ ಹೊಂಬಾಳೆ
ಸಂಸ್ಕೃತಿ ಸುಗ್ಗಿಯ ಕುಣಿತದಿ ಕರಗಿದೆ
ಬನ್ನಿರಣ್ಣ ಬನ್ನಿ ಪರಂಪರೆಯ
ಆಲೆಮನೆಗೆ ಹಂಚೋಣ
ಸಿಹಿ ಮೊಗೆಮೊಗೆದು