STORYMIRROR

Ramachandra Bhat B G

Classics Inspirational Others

4  

Ramachandra Bhat B G

Classics Inspirational Others

ಮರೆಯಲಾಗದ ಮಹಾನುಭಾವ

ಮರೆಯಲಾಗದ ಮಹಾನುಭಾವ

1 min
565

ನೋಡಲು ಸಣಕಲು ಬಡಜೀವ

ಕುಳ್ಳನೆಯ ವಿಸ್ಮಯ 

ನೋಡಿದರೆ ಇವನೇನು ಮಾಡಿಯಾನು?

56 ಇಂಚಿನ ಎದೆಯ ತಾಕತ್ತು 

ವೈರಿಯ ಹೆಡೆಮುರಿ ಕಟ್ಟಿಯೇ ಬಿಟ್ಟನಲ್ಲ

ಮುಘಲ್ ಸರಾಯಿಯ ಶಾಂತಿ ದೂತ

ಶಸ್ತ್ರಕ್ಕೂ ಸೈ ತ್ಯಾಗಕ್ಕೂ ಸೈ 

ಭಾರತೀಯರ ಮನಗೆದ್ದ ಜವಾನ

ಕಸದ ಗೋಧಿಯ ಮರೆಸಿ

ಹಂಗಿನ ಅನ್ನವ ವೃತದಿ ಗೆದ್ದು ದೇಶ ಕಾಯ್ದನಲ್ಲ 

ನಮ್ಮದೇ ದುರುಳ ಶಕುನಿಗಳ

 ರಾಜಕೀಯ ದಾಳವಾದನಲ್ಲ

ನಂಬಿಸಿ ಕತ್ತು ಕೊಯ್ಯುವ ಪಾಕಿಗಳ

ಕಾರಸ್ಥಾನಕೆ ಬಲಿಪಶುವಾದನೆ?

ಅಧಿಕಾರ ವ್ಯಾಮೋಹಕೆ ಭರತ

ವರ್ಷದ ಭವಿಷ್ಯ ಕಮರಿತಲ್ಲ? 

ಪರದೆಯ ಹಿಂದೇನಿತ್ತೋ

ವರುಷಗಳುರುಳಿದರೂ ಮತ್ತೆ ಮತ್ತೆ

ಕಾಡುವ ಚೈತನ್ಯ

ಗಾಂಧಿಯ ನೈಜ ಅನುಯಾಯಿ 

ನಿದ್ದೆಯಿಂದ ಬಡಿದೆಬ್ಬಿಸಿದ ಫಕೀರ

ನುಡಿದಂತೆ ನಡೆದ ರಾಜಕೀಯದ ಸಂತ 

ಸ್ಫೂರ್ತಿಯ ಅಕ್ಷಯ ದೇವತೆ 

ಅಮರತ್ವವಲ್ಲದೆ ಇನ್ನೇನು?



Rate this content
Log in

Similar kannada poem from Classics