STORYMIRROR

Prajna Raveesh

Abstract Classics Inspirational

4  

Prajna Raveesh

Abstract Classics Inspirational

ಪ್ರಕೃತಿ

ಪ್ರಕೃತಿ

1 min
219

ಹಸಿರು ಸೀರೆಯನುಟ್ಟು ಕಂಗೊಳಿಪ ಪ್ರಕೃತಿ ಮಾತೆ

ನಾವು ನಿನ್ನ ಮಕ್ಕಳು ನಿನ್ನ ಮಡಿಲಿನಲ್ಲಿ ಬೆಳೆದಿಹೆವು

ಸಕಲ ಜೀವರಾಶಿಗಳ ಹಸಿವು ನೀಗಿಸುವ ದೇವತೆ

ಬೆಳಗೆದ್ದು ನಿನ್ನ ರಮ್ಯ ರಮಣೀಯ ದೃಶ್ಯವ ಆಸ್ವಾದಿಸುವೆವು


ಸುಂದರವಾದ ಪ್ರಕೃತಿಯ ದೃಶ್ಯವನು ಕವಿ ಮನ ಆಗ್ರಾಣಿಸಲು

ಮನದಾಳದ ಭಾವನೆಗಳು ಅಕ್ಷರಗಳ ರೂಪದಲಿ ಹೊರ ಬಂದಿದೆ

ಹಸಿರು ಗಿಡ, ಮರ, ಬಳ್ಳಿ, ಹೂವುಗಳನು ಕಾಣುತಿರಲು

ಈ ಹಸಿರಿನ ತಾಣದಲಿ ಮನವು ನವಿಲಿನಂತೆ ನರ್ತಿಸಬಯಸಿದೆ


ಮೂಡಣದಿ ಕೆಂಪಾದ ರಂಗು ಬೀರಿ ಉದಯಿಸಿದ ಸೂರ್ಯ

ಹಕ್ಕಿಗಳ ಚಿಲಿಪಿಲಿ ನಿನಾದವು ಹೊಮ್ಮಿಸಿವೆ ಸಪ್ತಸ್ವರ

ಮನಮೋಹಕ ದೃಶ್ಯಕೆ ಸೋತು ನವಿಲುಗಳ ಗರಿಬಿಚ್ಚಿದ ನಾಟ್ಯ

ಕೋಗಿಲೆಗಳ ಇಂಪಾದ ಧ್ವನಿಯ ಕಂಪನ ತಲುಪಿದೆ ಮುಗಿಲೆತ್ತರ


ಈ ಹಸಿರಿನ ಸೊಬಗಿನಲಿ ಭಾವನೆಗಳು ಉಕ್ಕಿ ಬರುತಿದೆ

ಲೇಖನಿಯು ತಂತಾನೇ ಮುತ್ತಿನ ರೂಪದಲಿ ಅಕ್ಷರಗಳ ಪೋಣಿಸಲು

ಮನಕೇನೋ ನವಿರಾದ ಭಾವನೆಯು ಮೂಡಿ ಬರುತಿದೆ

ಈ ನಿಸರ್ಗವು ದೇವರಿತ್ತ ಕೊಡುಗೆಯು ಮನದ ನೋವ ಮರೆಯಲು.......


Rate this content
Log in

Similar kannada poem from Abstract