STORYMIRROR

Prajna Raveesh

Abstract Inspirational Others

4  

Prajna Raveesh

Abstract Inspirational Others

ಕುಂಕುಮ ಭರಣಿ

ಕುಂಕುಮ ಭರಣಿ

1 min
233

ಕುಂಕುಮ ಭರಣಿಯು ಸೌಭಾಗ್ಯದ ಸಂಕೇತವು

ನಾರಿಯು ಕುಂಕುಮವನಿಟ್ಟರೆ ಶುಭದಾಯಕವು

ಭರಣಿಯ ತುಂಬಾ ತುಂಬಿರಲು ಕುಂಕುಮವು

ಮನೆಯಲ್ಲಿ ನೆಲೆಸುವುದು ಸಮೃದ್ಧಿ, ಸುಖವು


ಕುಂಕುಮವು ದುಷ್ಟ ಶಕ್ತಿಗಳ ನಿಗ್ರಹಿಸುವುದು

ಧನಾತ್ಮಕವಾದ ದೈವೀ ಶಕ್ತಿಗಳ ಆಹ್ವಾನಿಸುವುದು

ಕುಂಕುಮವಿದ್ದಲ್ಲಿ ಲಕ್ಷ್ಮೀ ದೇವಿಯ ನೆಲೆಯಿರುವುದು

ಕುಂಕುಮವಿರಲು ಹಣೆಯಲ್ಲಿ ಮನಕೆ ಅಂಜಿಕೆ ಇರದು


ಕುಂಕುಮ ಬೇಕು ಎಲ್ಲಾ ಶುಭ ಕಾರ್ಯಗಳಿಗೆ

ಅರಶಿನ ಕುಂಕುಮವು ಶೋಭಿತವು ಪತಿವೃತೆಗೆ

ಕುಂಕುಮವಿಡುವರು ಹೆಣ್ಣು ಮಕ್ಕಳು ತಾಳಿಗೆ

ಸೌಭಾಗ್ಯಕ್ಕಾಗಿ ಭಕ್ತಿಯಿಂದ ಬೇಡುವರು ತಾಯಿಗೆ


ಕುಂಕುಮವು ಹೆಚ್ಚಿಸುವುದು ಮನೆಯ ಶೋಭೆಯ

ಕರುಣಿಸುವುದು ಮನೆ ತುಂಬಾ ಶಾಂತಿ, ನೆಮ್ಮದಿಯ

ಭಕ್ತಿ ಮಾರ್ಗವು ಈಡೇರಿಸುವುದು ಮನದ ಬಯಕೆಯ

ಪರಿಪೂರ್ಣ ಮನದಲಿ ಪ್ರಾರ್ಥಿಸೋಣ ಆ ಮಾತೆಯ.



Rate this content
Log in

Similar kannada poem from Abstract