ಮಳೆ ಹನಿಗಳ ಆಟ.
ಮಳೆ ಹನಿಗಳ ಆಟ.


ಮುಂಗಾರು ಮುಗಿಲ ಮಳೆ ಮೋಡದಲ್ಲಿ,
ಝಲ್ ಎಂದಿದೆ ನಾದ ಎದೆಯ ಗೂಡಲ್ಲಿ,
ಎಲ್ಲೆಲ್ಲೂ ಮಳೆಯ ಹನಿಗಳ ಆಟ,
ಮನದಲ್ಲಿ ತಂಪಗಿನ ಕನಸಿನ ರಸದೂಟ.
ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ,
ಕುಣಿದಿದೆ ಮನಸ್ಸು ಬಾಲ್ಯಕ್ಕೆ ಓಡಿ,
ಪಟಪಟನೆ ಬೀಳುವ ಮಳೆಯ ಹನಿಯ,
ಮೋಡಿ ವಿವರಿಸಲಾಗದು ಬರಿ ಬರಹದಲ್ಲಿ.
ಹಚ್ಚ ಹಸಿರಿನ ತೋಟ,
ಎಲ್ಲೆಲ್ಲೂ ಸುಂದರ ನೋಟ,
ತುಂಬಿ ಹರಿಯುವ ನದಿ ತೊರೆಯ ಓಟ,
ಸಾಗಿದೆ ಸಮುದ್ರದ ಕಡೆಗೆ ರಭಸದಲ್ಲಿ.
ಕಣ್ಣು ಕೋರೈಸುವ ಮಿಂಚು,
ಕಾರ್ಮುಗಿಲ ಅಂಚಲ್ಲಿ,
ಕಿಟಕಿಯಲ್ಲಿ ಕಣ್ಣಿಟ್ಟು ಕುಳಿತಿಹೆ ನಾನಿಲ್ಲಿ,
ಕಳೆದು ಹೋಗುವ ಆಸೆ ಮೂಡಿದೆ ನನ್ನಲ್ಲಿ.
ಪುಟ್ಟ ಮಳೆಯ ಹನಿಯಲ್ಲಿ,
ಕಳೆದು ಹೋಗಿರುವೆ ನಾನಿಲ್ಲಿ.