ನಂದಾದೀಪ
ನಂದಾದೀಪ


ಕಾರ್ಗತ್ತಲು ತುಂಬಿದ ಬದುಕಿಗೆ,
ನೀ ಬಂದೆ ಬೆಳದಿಂಗಳಂತೆ.
ತುಂಬಿದೆ ನನ್ನ ಮನಸ್ಸು,
ಮೂಡಿಸಿದೆ ನೂರು ಕನಸು.
ಎದುರಿಸಿದೆ ಜೊತೆ ನಿಂತು ಬಂದ ಕಷ್ಟಗಳನ್ನು
ಮರೆಯಾಗಿಸಿದೆ ನನ್ನೆಲ್ಲಾ ನೋವುಗಳನ್ನು,
ನೀ ಬರಿ ನನ್ನ ಜೊತೆಗಾತಿಯಲ್ಲ.
ನನ್ನ ಬದುಕಿನ ಇರುಳನ್ನು ಕಳೆದ ಪ್ರಣತಿ,
ನೋವು ನೀಗುವ ಆತ್ಮ ಸಂಗಾತಿ.
ನೀನು ಸಮಸ್ಯೆಗಳಿಗೆ ಸಿಲುಕಿ,
ಹೊಯ್ದಾಡುವಾಗ ಕಾಯುವೆ ನಾನು,
ನಿನ್ನ ಪ್ರಭೆ ಆರಿ ಹೋಗದಂತೆ,
ಬದುಕಿನ ಕುಲುಮೆಯಲ್ಲಿ ಸುಡುವಾಗ,
ನಾನಾಗುವೆ ತೈಲದಂತೆ,
ಕಾಪಾಡುವೆ ನಿನ್ನನ್ನು ಸದಾ,
ನನ್ನ ಮನೆಯ ನಂದಾದೀಪದಂತೆ.