ಒಲವಿಗೆ ದೃಷ್ಠಿಬೊಟ್ಟು
ಒಲವಿಗೆ ದೃಷ್ಠಿಬೊಟ್ಟು


ಗುಟ್ಟು ರಟ್ಟೇಂದು ಸಿಟ್ಟು ಏಕೆ,
ಬಿಟ್ಟು ಬಾ ಈಗ ನನ್ನ ಒಟ್ಟು,
ಒಟ್ಟಾಗಿ ತಿನ್ನೋಣ ಕಾಯಿ ಒಬ್ಬಟ್ಟು,
ಹೋಗಬೇಡ ನನ್ನ ಬಿಟ್ಟು, ಟೂ ಬಿಟ್ಟು.
ಮಾಡಬೇಡ ಆಯಕಟ್ಟು,
ನಿನಗಾಗಿ ಈ ಹುಟ್ಟು ,
ಒಟ್ಟಾಗಿ ಒಗ್ಗಟ್ಟಾಗಿ ಇದ್ದಾಗ ಹೆಚ್ಚುವುದು
ಪ್ರೀತಿ ಬೆಟ್ಟದಷ್ಟು ಸ್ನೇಹವಿರಲಿ ಇನ್ನಷ್ಟು.
ಇರುವೆನು ನಿನ್ನೊಟ್ಟು ಕಾಪಾಡುವೆನು
ನಮ್ಮ ಪ್ರೀತಿಯನ್ನು ಬೆಚ್ಚಗೆ ನನ್ನ ಎದೆಗೂಡಲಿಟ್ಟು,
ಅಟ್ಟುವೆನು ಇಷ್ಟವಿಲ್ಲದ ಕೆಟ್ಟ ಹ್ಯಾಬಿಟ್ಟು,
ಇರಬೇಕು ಎಂದೂ ನೀ ನನ್ನೊಟ್ಟು.
ಕಷ್ಟ ನಷ್ಟಗಳೇನೇ ಬರಲಿ,
ಕಾಯುವೆ ತಟ್ಟದಂತೆ ನಿನ್ನ ಕಾಪಿಟ್ಟು,
ಏಕೆಂದರೆ ನಾನು ಪ್ರೀತಿಸಿದೆ ನಿನ್ನ ಮನಸಿಟ್ಟು,
ಬಾ ನಿನ್ನ ಮುನಿಸು ಬಿಟ್ಟು.
ಬಾ ನನ್ನ ಮನೆ ಒಳಗೆ ಅಡಿ ಇಟ್ಟು,
ಬಾಳೋಣ ಸ್ವರ್ಗಕ್ಕೆ ಕಿಚ್ಚಿಟ್ಟು,
ಅವರಿವರ ಹೊಟ್ಟೆಕಿಚ್ಚು ಆಗಲಿ
ನಮ್ಮ ಒಲವಿಗೆ ದೃಷ್ಠಿಬೊಟ್ಟು.
ದೀಪಾವಳಿಯ ದೀಪ ಹಚ್ಚೊಣ ಬಾ ಬೇಗ,
ನೀನೀಗ ಹೊಸ ಕನಸ ಕಟ್ಟು.