ಪ್ರೀತಿ
ಪ್ರೀತಿ
ನಮ್ಮ ಇಬ್ಬರ ಪ್ರೀತಿಯ ಸೆಳೆತದಲ್ಲಿ
ನಮ್ಮ ಇಬ್ಬರ ಪ್ರೇಮದ ಹಂಬಲದಲ್ಲಿ
ನಮ್ಮ ಇಬ್ಬರ ಮುದ್ದು ಪ್ರೀತಿಯ ಕಣ್ಣುಗಳಲ್ಲಿ
ನಾ ಬರೆದೆನು ಮುದ್ದು ಕವನದ ಹೆಸರುಗಳಲ್ಲಿ
ಬಾ ನನ್ನ ಮುದ್ದಿನ ರಾಣಿ ಕವನ
ನಮ್ಮ ಜೋಡಿ ಕೇಳಲು ನವೀನ
ನಮ್ಮ ಇಬ್ಬರ ಹೆಸರು ಅಮರ
ನಮ್ಮ ಪ್ರೀತಿಯ ಸವಿ ಮಧುರ
ಯಾಕೆ ನನ್ನ ಮರೆಯಲ್ಲಿ ನಿಂತುಕೊಂಡಿರುವೆ
ಯಾಕೆ ನನ್ನ ಬಳಿಯಿಂದ ದೂರ ಸರಿಯುವೆ
ನಿನ್ನ ಮನಸು ಪ್ರೀತಿಯ ಮಂಜು ಕರಗಿದಂತೆ
ನನ್ನ ಮಡಿಲಿನಲ್ಲಿ ನೀನು ಕೂಸು ಮಲಗಿದಂತೆ
ನಮ್ಮ ಇಬ್ಬರ ಪ್ರೀತಿಯ ಮರಳಿನಲ್ಲಿ
ನಮ್ಮ ಇಬ್ಬರ ಪ್ರೀತಿಯ ಹೆಸರಿನಲ್ಲಿ
ನನ್ನ ಮುದ್ದು ಪ್ರೇಮದ ರಾಗದಲ್ಲಿ
ಪ್ರೀತಿ ಎಂಬ ಮುದ್ದು ಹಂಬಲದಲ್ಲಿ

