ಮಳೆ
ಮಳೆ
ಎಲ್ಲೆಲ್ಲೂ ನೀನೇ ಕಾಣುತ್ತಿರುವೆ
ನನ್ನ ಹೃದಯ ಬಡಿತ ನೀನಾಗಿರುವೆ
ಇಬ್ಬನಿ ಮಳೆ ಬರಲು ಕಾರಣವಾಗಿರುವೆ
ನೀನೇ ಕನಸಿನ ರೆಕ್ಕೆಯನ್ನು ಜೋಡಿಸಿರುವೆ
ಪ್ರೀತಿಯೆನ್ನುವ ಮೆಹಂದಿ ಹಾಕಿದೆ
ಶುಖರಾಜನಲ್ಲಿ ಸಂಗೀತ ಹೇಳಿಸಿದೆ
ಅಗಸದಿಂದ ಪುಷ್ಪ ಮಳೆ ಸುರಿಸಿದೆ
ಮಲ್ಲಿಗೆ ಹೂವು ನಗುವನ್ನು ಕಲಿಸಿದೆ
ಅಂಬರದಲ್ಲಿರುವ ಚೆಲುವೆ ನೀನು
ಕಡಲಿನಲ್ಲಿರುವ ಸುಂದರ ಮೀನು
ಏನು ಎಂದೂ ವರ್ಣಿಸಲು ನೀನು
ಸುಂದರ ರೂಪ ಕೊಡುವೆನು ನಾನು
ಹೂವನ ಮೇಲೆ ಇಬ್ಬನಿ ಬೀಳಿಸಿದೆ
ಇಬ್ಬನಿ ಸ್ಪರ್ಶದಿಂದ ಕನಸು ನನಸಾಗಿದೆ
ಆಹಾ ಹನಿ ಹನಿ ಇಬ್ಬನಿಯಾಗಿ ಕಾಣುತ್ತಿದೆ
ಮನಸು ಕನಸುಗಳಿಗೆ ರೆಕ್ಕೆಯನ್ನು ಜೋಡಿಸಿದೆ