ನಾ ಸೋತದ್ದು ನಿಜಾನೆ,
ನಾ ಸೋತದ್ದು ನಿಜಾನೆ,
ಯಾಕೆಂದರೆ,
ಅವಳ ಕಣ್ಣ ನೋಟದ ಅಮಲು whisky ಇದ್ದಂತೆ
ಮಂದಹಾಸ ಬೀರುವ ನಗು ಥೇಟ್ Red Wine.
ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ.
ಬೆಳ್ಬೆಳಿಗ್ಗೆ ಡ್ರಾಪ್ ಕೇಳಿ ಕೂತಾಗ, ನನ್ನ ಲಕ್ಕೀ Scootty
Break ಹಾಕಿದಾಗೆಲ್ಲಾ ಒತ್ತೊತ್ತಿ ಆನಿಸುವ Scotch
Butter ನಂತೆ ನಾ ಕರಗಿ ಅಲ್ಲೇ Black forest ಆಗಿದ್ದೆ.
ಅವಳೆಷ್ಟು ಲಕ್ಕೀ ಅಂದ್ರೆ, ಅವನದೇ ಪಲ್ಲಕ್ಕಿ ಹೊರಲು
ಅವಲಕ್ಕಿ ಮೊಸರು ಕಲಸಿ ತಿಂದಷ್ಟೇ ಖುಷಿ ಇರಲು
ಯಾಲಕ್ಕೀ ಹಾಕಿ, ಚಹಾದ ಕಪ್ ತುಟಿಗಿಡುವವನಿರಲು
ಇರುಳಲ್ಲಿ ಕಾಡಿ ಮರಳುಗಾಡಲ್ಲಿ ಕೈಬಿಡುವಳೆಂದವ
ಬಳಿಯಲ್ಲೇ ಕುಳಿತು ಮುಂಗುರುಳ ತೀಡುವಾಸೆಯಲಿ
ಕೆನ್ನೆಕೆಂಪಿನ ಸಂಚಿಗೆ ಕೈ ಕೂದಲಿನ ಸಿಕ್ಕಿನೊಳಗೆ ಕೈದಿ.
ಬಿಸಿಯಪ್ಪುಗೆಯೊಮ್ಮೆ ಬಪ್ಪುದೇ ಎಂದು ಹಾತೊರೆಯೆ
ಕಿಸಕ್ಕನೆ ನಕ್ಕವಳ ತುಟಿಯ ಮಾಟ Rum ಹೀರಿದಂತೇ
ಬೆಕ್ಕಸಬೆರಗಾಗಿ ಅರಳಿಸಿದ ಕಣ್ಣಲಿ ಅವಳದೇ honey.
ಒಲಿದಂತೆ ತೋರಿ, ಮಂಜಂತೆ ಜಾರುವ ನಶೆ ನನ್ನವಳು
ಹೊಲಿದೆ ತುಟಿಗಳನು, ಕಲಿತೆ ಮೌನ, ಅವಳದೆ ಎಲ್ಲ
ಬೆಲ್ಲ ಅವಳು, ಇರುವೆ ನಾನು, ಕಿಂಚಿತ್ತು ಸಿಹಿ ಸಾಕು.
ಜಯಶ್ರೀ ಹಳ್ಳೂರ....

