ಮುದ್ದು ಮಕ್ಕಳ ಉಪಾಯ!!
ಮುದ್ದು ಮಕ್ಕಳ ಉಪಾಯ!!
ಅಮ್ಮನ ತರ ನಮಗೂ ಯಾಕೆ ಉದ್ದ ಜೆಡೆಯಿಲ್ಲ?!
ಉದ್ದ ಜುಟ್ಟಿಗೆ ಮಲ್ಲಿಗೆ ಮಾಲೆ ಮುಡಿಯಬೇಕಲ್ಲ?!
ಅಮ್ಮಾ ಅಮ್ಮಾ ನಮಗೂ ಕೂಡ ಮಲ್ಲಿಗೆ ಮುಡಿಸಮ್ಮಾ
ಬೋಳು ತಲೆಗೆ ಮಲ್ಲಿಗೆಯ ನಾ ಹೇಗೆ ಮುಡಿಸಲಮ್ಮಾ?!
ಕ್ಲಿಪ್ ನು ಹಾಕಿ ಹೂ ಮುಡಿಸಿದರೆ ಜಾರಿ ಬಿದ್ದೀತು ತಾನೇ?
ಮತ್ತೆ ಹೇಗೆ ನಾ ಮಲ್ಲಿಗೆ ಮುಡಿಸಲಿ ನೀನೇ ಹೇಳು ಶಿವನೆ
ಅಯ್ಯೋ ಅಮ್ಮಾ ನೋಡಲ್ಲಿ ಗಮ್ ಟೇಪ್ ಇಹುದಲ್ಲಾ?!
ಗಮ್ಮನು ಅಂಟಿಸಿ ಹೂವನು ಮುಡಿಸಿದರೆ ಆಯ್ತಲ್ಲಾ?!
ಆಹಾ ಮಕ್ಕಳೇ ನೀವುಗಳು ನೋಡಿದ ಹಾಗಿಲ್ಲಾ!!
ಹೂ ಮುಡಿಸುವ ಉಪಾಯವ ನಂಗೆ ಹೇಳಿಕೊಟ್ರಲ್ಲ?!
ಅಮ್ಮ ಮುಡಿಸಿದಳು ಹೂವನ್ನು ಅಂಟಿಸಿ ಗಮ್ ನ್ನು
ವಿವರಿಸಲಾಗದು ಹೂ ಮುಡಿದು ಮಕ್ಕಳ ಖುಷಿಯನ್ನು!!