some ಸಾರ
some ಸಾರ
ನಿಂತಳವಳು ಸ್ವಲ್ಪ ದೂರ
ಸ್ಥಿತಿ ಎನದು ಘನ ಘೋರ
ಎಂತದಿಲ್ಲ ಇದಕೆ ಪರಿಹಾರ
ಹೊತ್ತು ಮನದಿ ಮಣ ಭಾರ
ಆತುರದಿ ಮಾಡಿದೆ ನಾನೇ ಸಾರ
ಇತ್ತು ಅಹುದು ಬಹಳ ಖಾರ
ತೆರೆಸಿತು ಎನ್ನ ಎಲ್ಲ ನವಧ್ವಾರ
ಮಿತಿಮೀರಿ ಕುಡಿದೆ ಇದ್ದ ನೀರ
ಹೊತ್ತ ಹೊಟ್ಟೆ ಬಹಳ ಭಾರ
ಒತ್ತರಸಿ ತುಂಬಿದ ಕಣ್ಣೀರ
ಮೆತ್ತಗೊರೆಸಿ ದೂಡಿದಳು ದೂರ
ತತ್ತರಿಸದರೂ ಇದೇ some ಸಾರ