ಮೌನ ಮಾತಾದಾಗ
ಮೌನ ಮಾತಾದಾಗ

1 min

249
ಮಕ್ಕಳಿಲ್ಲವೆಂದು
ಊರ್ದೇವರ ಬೇಡಿ
ಅರಳಿ ಮರದಡಿ
ಸರಸರನೆ ಸುತ್ತಾಡಿ
ಹಡೆದದ್ದು ಆರು
ಉಳಿದದ್ದು ಮೂರು
ಇದ್ದ ಮಗಳಿಗೊಬ್ಬ
ಅವನಾರೋ ದಕ್ಕ
ದೊಡ್ಡವನಿಗೊಬ್ಬಳು
ಓದಿದವಳು ಇಲ್ಲೇ ಪಕ್ಕ
ವಿದೇಶಿಯೊಬ್ಬಳಿಗೆ
ಚಿಕ್ಕ ಮಗನೇ ಸಿಕ್ಕ
ಮಕ್ಕಳೇಕಾದರೆಂದು
ಪರಿತಪಿಸಿ ಶಪಿಸಿ
ಪತಿ ಕೈಲಾಸ ವಾಸಿ
ಅಂದು ಹಡೆದಾನಂದ
ಇಂದು ಕಳಚದೆ ಬಂಧ
ಭಾವನೆಗಳು ಸುಟ್ಟು
ಎನಗೀಗ ಮರು ಹುಟ್ಟು