ಯಾವೂರವ ಇವಾ
ಯಾವೂರವ ಇವಾ
ಅಂದು ಕೊಂಡಿರಲಿಲ್ಲ ಇವ
ಕಾಡುತಾನಂತ ಹಿಂಗ
ಹಚ್ಚಿಕೊಂಡೆ ಮೆಚ್ಚಿಕೊಂಡೆ
ಈಗ ಬೆಚ್ಚಿ ಬೆಚ್ಚಿ ಕುಂತೆ
ತಡೆಯಲೊಲ್ಲದು ಇವನ ಪ್ರೀತಿ
ಕಂಡಿಲ್ಲ ಎಂದೂ ಈ ರೀತಿ
ಅತ್ತು ಕರೀತಾನ ಹಟಮಾಡಿ
ಕುಂತು ಏಳುತಾನ ತಲೆ ತಿರುಗಿ
ಮಂಗಾಟವೇ ಪ್ರೀತಿ ಎಂದವ
ಮರೆಮಾಚುವ ಮಾತು ಹೊರ ಹಾಕ್ಯಾನ
ಕುಂತರೂ ನಿಂತರೂ ಇವ ಕಾಡ್ಯಾನ
ಸುಡು ಸುಡು ಎಂದು ಸುಡುತಾನ
ಸಾಕಾಯ್ತು ಇವನ ಸಹವಾಸ
ನಂಬಿ ಬಂದರ ನನಗ ವನವಾಸ
.