ಶಬ್ದಗಳು
ಶಬ್ದಗಳು
ಅತಿಥಿಯಾತ..
ವೇದಿಕೆಯ ಮೇಲೆ ತಾರೆ
ಗತ್ತುಗಾಂಭಿರ್ಯದ ತೇಪೆ |
ಕರತಾಡನದ ನಡುವೆ
ಅರಳಿದ ಮತ್ತು
ಬಾಳಿದ ರಾಜ
ತುಟಿಗಳ ಗಟ್ಟಿಮಾಡಿ
ಹೊರಹಾಕಬೇಕು
ಶಬ್ದಗಳ | ಮತ್ತು
ಒಂದಷ್ಟು ಕತೆ
ಮತ್ತೊಂದಷ್ಟು ಭಾವನಾತ್ಮ-ಕತೆ |
ನಾಲ್ಕು ದಿಕ್ಕುಗಳಿಗೂ
ಶಬ್ದಗಳ ರವರವ ಅಷ್ಟೆ |
ಕಾರಣ
ಆತ ಓದಿಕೊಂಡಿರಲಿಲ್ಲ
ಮತ್ತೆ ಅವರು?
ಅವರೂ
ಓದಿಕೊಂಡಿರಲಿಲ್ಲ ||