STORYMIRROR

JAISHREE HALLUR

Comedy Romance Fantasy

4  

JAISHREE HALLUR

Comedy Romance Fantasy

***ಹಗಲುಗನಸು****

***ಹಗಲುಗನಸು****

1 min
359

ಅವಳು ಹೆಜ್ಜೆಯಿಟ್ಟು ನಡೆದಾಗಲೆಲ್ಲಾ

ಯಾಕೋ ಎದೆ ತಾಳತಪ್ಪಿ...


ಯೋಜಿಸಿಕೊಂಡಿದ್ದ ಪ್ಲಾನೆಲ್ಲಾ 

ತಲೆಕೆಳಗಾಗಿ ಮೊದಲಿಂದ 

ಶುರು ಮಾಡೋ ಹಾಗಾಗಿದೆ..


ಗೆಜ್ಜೆಗಳ ಖಿಣಿಖಿಣಿಗೆ..ಮೆಟ್ಟಿಲುಗಳು ಕಣಕಣಿಸಿ 

ಹವಾನಿಯಂತ್ರಿತ ಕೋಣೆಯಲೂ 

ಬಿಸಿಗಾಳಿಯ ಆವಾಹನೆ..


ಬಾಗಿಲಲಿ ತಟಸ್ಥವಾದಾಗಲಂತೂ

ಉಸಿರೇ ಗಕ್ಕನೆ ನಿಂತಷ್ಟು ನಿಶಬ್ದ, ಆದರೂ

ಅವಳ ಗೆಜ್ಜೆಕಾಲ್ಗಳತ್ತಲೇ ನೋಟ..ಎಂತ ಮಾಟ!


ನುಣುಪು ನೂಪೂರಂಗಳಿಗೆ ಪಾದಗಳ ಸ್ಪರ್ಶ

ಸಾಲದೆಂಬಂತೆ ರತ್ನಗಂಬಳಿಗೆ ಎಲ್ಲಿಲ್ಲದ ಹರ್ಷ

ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ


ಮಾತಿಗೇನೋ ಬರ, ಕಣ್ಣಲ್ಲೇನೋ ಭಾವನೆಗಳು

ಗಂಟಲಲ್ಲೇ ಉಳಿದ ದನಿ ಉಡುಗಿತ್ತು ಆ ನಗೆಗೆ

ಕನ್ನಿಕೆಯ ಚೆಲುವು ಕೆನ್ನೆ ಸವರಿ ಮನವ ತಾಗಿತ್ತು..


(ಮಧ್ಯಾನದ ಹಗಲುಗನಸು ಮಾರಾಯ್ರೇ....


Rate this content
Log in

Similar kannada poem from Comedy