ಕಾಣದ ಕೈ
ಕಾಣದ ಕೈ
ಮನೆ ಕಾಯುವ ನಾನು
ಬಯಸಿದರೇನು ಸುಖ
ನಾನೆಂದೂ ಮನೆ ಹೊರಗೆ
ನನ್ನವನು ಮಾತ್ರ ಸದಾ
ಮನೆಯೊಡತಿ ಬಳಿ ಒಳಗೆ
ನನ್ನೊಳು ಸೇರಿ ಕೆಲ ಕ್ಷಣ
ಹೊರಡುವನೆಲ್ಲೋ ತಾನು
ಮನೆಯೊಡತಿಯ ಜೊತೆ
ಹಿಂದುರಿಗಿ ಬಂದಾಗ
ಮತ್ತದೇ ಕ್ಷಣಿಕ ಸಮಾಗಮ
ನನ್ನವನೊಮ್ಮೆ ಕಾಣದಾದ
ಪರಿತಪಿಸಿ ನೊಂದೆ
ಅದಕೆ ಕಾರಣ ವಿಷ್ಟೇ
ಹೊಸಬನಿಗೂ ಬಂದೊಡನೆ
ತೆರೆದು ಕೊಡಬೇಕಲ್ಲ ಮುಂದೆ
(ಬೀಗ ಮತ್ತು ಕಳೆದು ಹೋದ ಅದರ ಕೈ )