ಗಣಪತಿಗೆ ಗೊತ್ತಿಲ್ವ !
ಗಣಪತಿಗೆ ಗೊತ್ತಿಲ್ವ !

1 min

64
ಮೊದಲು ನಾ ಇದ್ದೆ ದೇವರ ಮನೇಲಿ
ನಂತರ ನನ್ನ ಬಿಟ್ಟರು ರಸ್ತೆ ಬದೀಲಿ
ಆಗ ಮಂತ್ರ ಪೂಜೆ ಹಾಡಿನ ನಿನಾದ
ಈಗ ತಮಟೆಯ ಯುವಕರ ಉನ್ಮಾದ ll
ಆಗೆಲ್ಲ ಭಕ್ತಿಯಿಂದ ಪೂಜೆ ಪುನಸ್ಕಾರ
ಈಗಿಲ್ಲಿ ದೊಡ್ಡೋರು ಬಂದ್ರೆ ನಮಸ್ಕಾರ
ನಾನಂದ್ರೆ ಇತ್ತು ಜನಕ್ಕೆ ಭಯ ಭಕ್ತಿ
ಈಗ ಚಂದ ವಸೂಲಿಗೆ ಹೊಸ ಶಕ್ತಿ
ಮೊದಲೆಲ್ಲ ನಾನಂದ್ರೆ ಏನೋ ಭಯ
ಈಗಂತೂ ನೀವಂದ್ರೆ ನನಗೇ ಭಯ
ಮಣ್ಣಲ್ಲಿ ಮಾಡಿ ನೀರಲ್ಲಿ ಬಿಡಿ ಅಂದೆ
ಎಣ್ಣೆ ಹೊಡೀತಾರೆ ಮೆರವಣಿಗೆ ಮುಂದೆ
ಬೇಡಪ್ಪ ಬಿಟ್ಬಿಡಿ ಅಂತೀನಿ ಸಾಕಾಗಿದೆ
ಹೇಳ್ತಾರೆ ಆಗಲ್ಲ ಇನ್ನೂ ವಸೂಲಿ ಇದೆ