STORYMIRROR

JAISHREE HALLUR

Comedy Drama Others

4  

JAISHREE HALLUR

Comedy Drama Others

ನನ್ನವಳು***

ನನ್ನವಳು***

1 min
367


ನಲ್ಲೇ...

ನನ್ನ ಬದುಕೇ ಅವಲಕ್ಕಿ ಚಿತ್ರಾನ್ನ

ಅದರಲಿನ ಹುರಿದ ಶೇಂಗಾ ನೀನು


ಕಾದ ಬಾಣಲಿಯ ಎಣ್ಣೆ ನಾನು

ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು

ಅವಲಕ್ಕಿಯ ಸವಿದಾಗ ಬಾಯಿಗೆ ಸಿಗುವ

ಹದ ಬೆರೆತ ಸ್ವಾದಿಷ್ಟೆ ನೀನು


ನಲ್ಲೇ...

ನನ್ನ ಬದುಕಿನ ಸಂಕ್ರಾಂತಿಯ ಕುಸುರಿ ನೀನು

ಹೊಸದಾಗಿ ಮಜ್ಜನಗೈದಂತೆ ಬಿಳೀ ಶೇಂಗಾ ಹಳಕು


ಎಳ್ಳು ಕೊಬ್ಬರಿಗಳ ನಡುವೆ ಬೆಲ್ಲ ನಾನು

ಬೆಲ್ಲದೊಡನೆ ಬೆರೆತ ಶೇಂಗಾ ನೀನು

ಸವಿದಷ್ಟು ರುಚಿಯು ಹಬ್ಬದಾ ಸಂಬ್ರಮ

ಸಂಕ್ರಾಂತಿಯ ಕಾಂತಿ ನೀನು


ನಲ್ಲೇ...

ನನ್ನ ಬದುಕಿದು ಶೇಂಗಾ ಹೋಳಿಗೆಯಂತೆ

ಹೂರಣವಾದೆವು ನಾವು ಹದವನರಿತು


ಮಾಗಿ ಬೀಗಿದೆ ನೀನು ಪುಡಿಯಾಗಿ

ಕರಗಿ ಮಿಲನದಿ ಬೆಂದೆ ಉಂಡೆಯಾಗಿ

ಒಂದಾಗಿ ಒತ್ತಾಗಿ ಸೇರುತ ಕಣಕದೊಳು

ಸಿಹಿ ಸವಿ ಹೋಳಿಗೆಯಲಿ ಸೊಗಸಾಗಿ....



Rate this content
Log in

Similar kannada poem from Comedy