ರಸ್ತೆ - ಅವ್ಯವಸ್ಥೆ
ರಸ್ತೆ - ಅವ್ಯವಸ್ಥೆ
ಗಾಲಿಗಳುರುಳುಗಳ
ಜನಗಳುಗುಳುಗಳ
ಸಹಿಸಿ ಮಲಗಿರುವೆ
ಸರಕಾರ ಗುತ್ತಿಗೆದಾರ
ಇವರ ಅವ್ಯವಹಾರ
ಕಂಡರೂ ಸುಮ್ಮನಿರುವೆ
ಎಲ್ಲೆಡೆ ಹರಿದ ಸೀರೆ
ಸುರಿವ ಮಳೆ ಬೇರೆ
ಒಡಲ ತೋರಿರುವೆ
ಅಮಾಯಕರ ಸಾವು
ನನಗೂ ಅದು ನೋವು
ತಿಳಿದೇ ಹೀಗೆ ಬಿದ್ದಿರುವೆ
ಗಾಲಿಗಳುರುಳುಗಳ
ಜನಗಳುಗುಳುಗಳ
ಸಹಿಸಿ ಮಲಗಿರುವೆ
ಸರಕಾರ ಗುತ್ತಿಗೆದಾರ
ಇವರ ಅವ್ಯವಹಾರ
ಕಂಡರೂ ಸುಮ್ಮನಿರುವೆ
ಎಲ್ಲೆಡೆ ಹರಿದ ಸೀರೆ
ಸುರಿವ ಮಳೆ ಬೇರೆ
ಒಡಲ ತೋರಿರುವೆ
ಅಮಾಯಕರ ಸಾವು
ನನಗೂ ಅದು ನೋವು
ತಿಳಿದೇ ಹೀಗೆ ಬಿದ್ದಿರುವೆ