STORYMIRROR

Rathna Nagaraj

Comedy Tragedy

4.5  

Rathna Nagaraj

Comedy Tragedy

ಕೊರೋನಾ ಲಾಲ್ (ಅಣಕವಾಡು ಕವನ)

ಕೊರೋನಾ ಲಾಲ್ (ಅಣಕವಾಡು ಕವನ)

1 min
24.4K


ಕೊರೋನಾ ಲಾಲ್

ನಾನು ಯಾರು ಯಾವ ಊರು

ನೀವು ಎಲ್ಲ ಬಲ್ಲಿರಲ್ಲ.....

ನನ್ನ ಹೆಸರೆ ಕೊರೋನಾ

ನಾನೆ ಕೊರೋನಾ ಲಾಲ್ 


ನನ್ನ ಊರೇ ಚೈನಾ

ನನ್ನ ಹೆಜ್ಜೆ ಕಂಡವರುಂಟು

ನನ್ನ ಬಗ್ಗೆ ಬಲ್ಲವರುಂಟು

ನನ್ನ ಬಣ್ಣ ಹಸಿರುಂಟು          ---ನನ್ನ ಹೆಸರೆ ಕೊರೋನಾ


ನನ್ನ ಹೆಸರಲ್ಲಿ ಕೊರಿಯೋದುಂಟು

ನನ್ನ ಹೆಸರಲ್ಲಿ ರೋಧನೆಯುಂಟು

ನಾನೇ ಕೊರೋನಾ ಮಾನವನ ಕೊರೆಯವವ

ಕರೆಯದೆ ಬರುವವ ನಾನೇ ಕೊರೋನಾ    ---ನನ್ನ ಹೆಸರೆ ಕೊರೋನಾ


ಕೆಸರು ಕೊಚ್ಚೆಯ ನೆಂಟ ನಾನು

ತಂಡಿಗಾಗಿ ಪ್ರಾಣ ಬಿಡಬಲ್ಲೆ

ಮನಕುಲದ ಶತ್ರು ನಾನು

ಕ್ಷಣದಲ್ಲೇ ದೇಹ ನಿರ್ನಾಮ ಮಾಡ ಬಲ್ಲೆ     ---ನನ್ನ ಹೆಸರೆ ಕೊರೋನಾ


ನನ್ನ ಕೊಲ್ಲುವವರಿಗೆ&n

bsp;

ಸೊಂಕು ತಗಲಿಸ ಬಲ್ಲೆ

ನನ್ನ ತಡೆಯುವ ಮಾಸ್ಕ್‍ಗೆ 

ಒಂದು ಗತಿ ಕಾಣಿಸ ಬಲ್ಲೆ         ---ನನ್ನ ಹೆಸರೆ ಕೊರೋನಾ

 

ಸೊಂಕು ಸಂಘದ ರಾಯಭಾರಿ ನಾನು

ಚೀನಿಗಳ ಬಂಟ ನಾನು 

ಪಾಕಿಸ್ಥಾನ ಕೈ ಬೀಡೇನು ನಾನು 

ಇಟಲಿಯವರನ್ನು 

ಬಲಿ ತೆಗೆದು ಕೊಂಡವನೆ ನಾನು      ---ನನ್ನ ಹೆಸರೆ ಕೊರೋನಾ

                     

ನನ್ನ ಗುರಿ ಬಲ್ಲಿರೇನು

ಚೀನಿಯರ ಜಯಭೇರಿ ನಾನು 

ಮನುಷ್ಯ ನಾಶ ಪ್ರಪಂಚ ವಿನಾಶ

ಬಲ್ಲಿರಲ್ಲ ಎಲ್ಲರೂ 

ನನ್ನ ಹೆಸರೇ ಕೊರೋನಾ

ನಾನೇ ಕೊರೋನಾ ಲಾಲ್






Rate this content
Log in

Similar kannada poem from Comedy