STORYMIRROR

Achala B.Henly

Abstract Comedy Classics

4  

Achala B.Henly

Abstract Comedy Classics

ದೂರದರ್ಶನದ ಸ್ವಗತ

ದೂರದರ್ಶನದ ಸ್ವಗತ

1 min
244


ದಿನಪೂರ್ತಿ ನಿಮ್ಮನ್ನು ನಕ್ಕು ನಲಿಸಿ,

ಅತ್ತು ಹಗುರಾಗಿಸಿ, ರಂಜಿಸಿ

ಮನರಂಜಿಸುವ ನನಗೂ ಮನಸ್ಸಿದೆ

ಬೇಕಿದೆ ನನಗೂ ಒಂದಷ್ಟು ಹೊತ್ತು ವಿಶ್ರಾಂತಿ

ಅದೇ ಸುಸಮಯವೆಂದು ತಿಳಿದು

ಒಳ್ಳೆಯ ಹವ್ಯಾಸಕ್ಕೆ ಸಮಯವನ್ನು ವಿನಯೋಗಿಸಿ..!


ಬಣ್ಣ ಬಣ್ಣದಲ್ಲಿ ಕಾಣುತ್ತೇನೆ

ನಿಮ್ಮನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತೇನೆ ಎಂದು ನನ್ನನ್ನಷ್ಟೇ ನೋಡಬೇಡಿ..?!

ಆಗಾಗ ಹಸಿರನ್ನು ನೋಡಿ,

ನಿಮ್ಮ ಕಣ್ಮನಗಳನ್ನು ತಂಪಾಗಿಸಿ..!!


ಜಾಣರ ಪೆಟ್ಟಿಗೆಯೆಂದು ಕರೆಯುತ್ತೀರಾ,

ಮೂರ್ಖರ ಪೆಟ್ಟಿಗೆಯೆಂದೂ ತೆಗಳುತ್ತೀರಾ..?!

ಇದೆಲ್ಲದಕ್ಕೂ ಕಾರಣ ನೀವೇ ಎಂದು ಗೊತ್ತಿದ್ದರೂ

ಮತ್ತೆ ಮತ್ತೆ ನನ್ನನ್ನೇ ದೂಷಿಸುತ್ತೀರಾ..!


ಸರಿಯೇ ಹೇಳಿ ನಿಮ್ಮ ಈ ವಿತಂಡವಾದ..?

ನಾನೂ ಎಷ್ಟು ದಿನವೆಂದು ದುಡಿಯಲಿ

ಅವಿರತವಾಗಿ ಎಲ್ಲರಿಗಾಗಿ..?

ದಯಮಾಡಿ ನನ್ನನ್ನೇ

ಯಾವಾಗಲೂ ಅವಲಂಬಿಸಬೇಡಿ,

ಬಿಡುವು ಕೊಟ್ಟು ನನಗೂ

ಆರಾಮಾಗಿರುವಂತೆ ಸ್ವಲ್ಪ ಸಹಕರಿಸಿ..!!



Rate this content
Log in

Similar kannada poem from Abstract