STORYMIRROR

Achala B.Henly

Abstract Classics Inspirational

4  

Achala B.Henly

Abstract Classics Inspirational

ತಮಸೋಮ ಜ್ಯೋತಿರ್ಗಮಯ...

ತಮಸೋಮ ಜ್ಯೋತಿರ್ಗಮಯ...

1 min
280

ದೀಪಗಳ ಬೆಳಕು ಬದುಕನ್ನು ಪ್ರಜ್ವಲಿಸಲಿ

ಎಲ್ಲರ ಬಾಳಲ್ಲೂ ಸುಖ ಶಾಂತಿ ನೆಲೆಸಲಿ.


ತಮಸೋಮ ಜ್ಯೋತಿರ್ಗಮಯ,

ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ

ನಮ್ಮೆಲ್ಲರ ಜೀವನದ ಪಯಣ.


ಅಜ್ಞಾನವೆಂಬ ಪೊಳ್ಳು ನಂಬಿಕೆಗಳು

ಜ್ಞಾನವೆಂಬ ಕಂದೀಲಿಗೆ ಸುಟ್ಟು ಕರಕಲಾಗಲಿ..!

ಅಸತ್ಯವೆಂಬ ಪೊರೆ ಕಳಚಿ, ಸತ್ಯದ ಪಥದಲ್ಲಿ ಸಾಗಿ

ಎಲ್ಲರ ಜೀವನ, ದೀಪದ ಬೆಳಕಿನಲ್ಲಿ ಬೆಳಗಲಿ..!


ದೀಪದ ಹಬ್ಬ ಎಲ್ಲರ ಬದುಕನ್ನು ಹಸನಾಗಿಸಲಿ

ಒಂದೇ ದಿನಕ್ಕೆ ದೀಪದ ಎಣ್ಣೆ ಮುಗಿಯದೆ

ಜೀವನ ಪೂರ್ತಿ ನಿತ್ಯ ಜ್ಯೋತಿಯಂತೆ ಬೆಳಗುತಿರಲಿ..!


Rate this content
Log in

Similar kannada poem from Abstract