ರಸಋಷಿಗೆ ನಮನ
ರಸಋಷಿಗೆ ನಮನ
ರಸಋಷಿ ಕುವೆಂಪುರವರಿಗೆ ಪ್ರೀತಿಯ ನಮನಗಳು
ಮಲೆಗಳಲಿ ಮದುಮಗಳನ್ನು ಸೃಷ್ಟಿಸಿ,
ಜಯ ಹೇ ಕರ್ನಾಟಕ ಮಾತೆ
ಎನ್ನುತ್ತಾ, ಮಹಾಚೇತನರಾದರು..!!
ಕುಪ್ಪಳ್ಳಿಯಲ್ಲಿ ಆಡಿ ಬೆಳೆದು, ಮೈಸೂರಿನ
ಉದಯರವಿಯಲ್ಲಿ ನೆಲೆ ಕಂಡರು.
ಕುಕ್ಕರಹಳ್ಳಿಯ ದಂಡೆಯ ಮೇಲೆ ಓಡಾಡುತ್ತಾ
ಮಹಾಕಾವ್ಯವನ್ನೇ ರಚಿಸಿದ ವಿಶ್ವ ಮಾನವರು..!!
ಜ್ಞಾನಪೀಠ ಪುರಸ್ಕೃತರು, ಮಂತ್ರ ಮಾಂಗಲ್ಯದ ರೂವಾರಿಗಳು,
ಹಲವು ಮಹನೀಯರಿಗೆ
ಪಾಠ ಹೇಳಿದ ಮಹಾ ಗುರುಗಳು..!
ಪುಟ್ಟ ಮಕ್ಕಳಿಗೆ ಪ್ರೀತಿಯ ಪುಟ್ಟಪ್ಪ ತಾತರು
ಇಡೀ ದೇಶವೇ ಕೊಂಡಾಡಿದ ಯುಗಪುರುಷರು..!!
