STORYMIRROR

Achala B.Henly

Abstract Classics Inspirational

4  

Achala B.Henly

Abstract Classics Inspirational

ಇದೇ ಜೀವನ

ಇದೇ ಜೀವನ

1 min
223

ಕಾರಿರುಳಲ್ಲಿ ದಟ್ಟ ಕಾನನದಲ್ಲಿ

ಕಳೆದುಹೋಗಿದ್ದೆ ನಾನೆಲ್ಲೋ

ಅಲೆಅಲೆಯುತಾ..!!

ಎಷ್ಟೇ ಹುಡುಕಿದರೂ ಮನೆಯ

ದಾರಿ ಸಿಗಲೊಲ್ಲದು

ಬೀದಿ ನಾಯಿಯ ಪಾಡಾಯಿತಲ್ಲ

ಎಂದುಕೊಂಡೆ ಶಪಿಸಿಕೊಳ್ಳುತ್ತಾ..!!


ಎಚ್ಚರಗೊಂಡೆ ಅಂದೇ ನಾನು

ಸಾಕು ಈ ಅಲೆದಾಟವೆಂದು,

"ಬದುಕನ್ನು ಬಂದಂತೆ ಸ್ವೀಕರಿಸಬೇಕೆಂದು"

ಮನದೊಳಗೆಯೇ ನಿರ್ಧರಿಸಿದೆ..!!

ಮಂಕು ಕವಿದ ಮನಸೀಗ 

ಮುಸ್ಸಂಜೆಯ ರಶ್ಮಿಗೆ ಅರಳಲು

ಶುರುವಾಯಿತು ಮೆಲ್ಲಮೆಲ್ಲನೆ..!!


ಇದೇ ಜೀವನದ ಸತ್ಯವೆಂದರಿತೆ

ಕತ್ತಲೆ ಎಂದು ಕುಳಿತರೆ

ಕತ್ತಲೆಯೇ ಇರುವುದು

ಅದ ಬಿಟ್ಟು ಹೊರ ಬಾ ಬೆಳಕಿನೆಡೆಗೆ..!!

ಆಗ ನೋಡು ಜೀವನವಾ

ನಿನಗೇ ಅಚ್ಚರಿಯಾಗುವುದು

ನಿನ್ನ ಬಾಳಿಗೆ ದೊರೆತ ಏಳ್ಗೆಗೆ..!!


இந்த உள்ளடக்கத்தை மதிப்பிடவும்
உள்நுழை

Similar kannada poem from Abstract