STORYMIRROR

Achala B.Henly

Abstract Classics Inspirational

4  

Achala B.Henly

Abstract Classics Inspirational

ದೀಪವು ನಿನ್ನದೇ, ಗಾಳಿಯು ನಿನ್ನದೇ

ದೀಪವು ನಿನ್ನದೇ, ಗಾಳಿಯು ನಿನ್ನದೇ

1 min
370


ಎಲ್ಲವೂ ನಿನ್ನಿಂದಲೇ ಎಂದು ನಾ ತಿಳಿದಿದ್ದೆ

ನಿನ್ನಿಂದಲೇ ಜಗವೆಲ್ಲ ಎಂದು ನಾ ಅರಿತಿದ್ದೆ...!


ಸುಖವು ನಿನ್ನಿಂದಲೇ, ದುಃಖವು ನಿನ್ನಿಂದಲೇ

ಎಂದು ನಿನ್ನ ಮೇಲೆಯೇ ಅವಲಂಬಿತನಾಗಿದ್ದೆ..!


ದೀಪವು ನಿನ್ನದೇ, ಗಾಳಿಯು ನಿನ್ನದೇ ಎಂದು 

ಸಕಲವೂ ನಿನ್ನಿಂದಲೇ ಎಂದು ನಾ ನಂಬಿದ್ದೆ..!


ನಾ ಖುಷಿಪಟ್ಟರೂ ನೀನೇ, ನಾ ಕುಸಿದರೂ ನೀನೇ

ಎಲ್ಲವೂ ನಿನ್ನಿಂದಲೇ ದೇವಾ ಎಂದುಕೊಂಡಿದ್ದೆ..!


ಯಾವ ಪರಿಶ್ರಮವನ್ನು ಪಡದೆ, ಪ್ರತಿಫಲವನ್ನಷ್ಟೇ

ನಿನ್ನಿಂದ ನಾ ಯಾವಾಗಲೂ ಬಯಸಿದ್ದೆ..!


ಯಾರಿಗೂ ಸಹಾಯ ಮಾಡದೇ, ಸ್ವಾರ್ಥಿಯಂತೆ

ನನ್ನ ಜೀವನವನ್ನಷ್ಟೇ ನಾ ಗಮನಿಸಿದೆ..!


ನಿನ್ನ ಮೆಚ್ಚಿಸುವುದಷ್ಟೇ ನನ್ನ ಜೀವನ,

ಅದ ಬಿಟ್ಟು ಬೇರೇನಿಲ್ಲ ಎಂದು ಮೂಢನಂತೆ ಬದುಕಿದೆ..!


ನೀ ನನ್ನ ಕಾಯಬೇಕೆಂದರೆ, ನಾನು ನಿನಗಲ್ಲ

ನನ್ನ ಜೊತೆಗಿರುವವರನ್ನು ಕಾಯಬೇಕೆಂದು ಅರಿತೆ..!


ಪರರಿಗೆ ಉಪಕಾರ ಮಾಡಿದರೆ ಮಾತ್ರ ನೀ ನನಗೆ

ದಾರಿ ತೋರಿಸುತ್ತೀಯ ಎಂದು ಕೊನೆಗೂ ನಾ ತಿಳಿದೆ..!!


Rate this content
Log in

Similar kannada poem from Abstract