STORYMIRROR

Achala B.Henly

Abstract Classics Inspirational

4  

Achala B.Henly

Abstract Classics Inspirational

ಚಂಚಲ ಮನಸ್ಸು

ಚಂಚಲ ಮನಸ್ಸು

1 min
271

ಚಿಟ್ಟೆಯಂತಾಗಿದೆ ಚಿತ್ತ ಚಂಚಲವಾದ ಮನಸು 

ಅದಕೆ ಹಾಕಲೇಬೇಕಿದೆ ಸರಿಯಾದ ಲಗಾಮು

ಇಲ್ಲದಿದ್ದರೆ ಹಾರಿ ಹೋಗಬಹುದು ಎಲ್ಲೆಲ್ಲೋ,

ನಮ್ಮ ಬುದ್ಧಿಯ ಕೇಳದೇ ಈ ಹುಚ್ಚು ಮನಸ್ಸು..!!


ಚಂಚಲವಾದ ಮನಸ್ಸನ್ನು ಮತ್ತೆ ಹಿಡಿದು

ತರುವುದು ಬಲು ತ್ರಾಸು,

ಮರ್ಕಟದಂತಹ ಮನಸಲಿ ಸುಳಿಯದಿರಲಿ

ಬೇಡದ ನಕಾರಾತ್ಮಕ ಚಿಂತನೆಗಳು..!!


ಮಾಡಿಕೊಳ್ಳದಿರಲಿ ಈ ಮನಸು

ಸಕಾರಾತ್ಮಕ ಯೋಚನೆಗಳಿಗೆ ಮುನಿಸು,

ಎಲ್ಲ ವಯಸ್ಸಿನ ಮನಸುಗಳು ಕೇಳಲಿ

ತಾಳ್ಮೆಯಿಂದ ಎಲ್ಲರ ಮುತ್ತಿನಂತಹ ಮಾತು...!!


Rate this content
Log in

Similar kannada poem from Abstract