ನೆರಳು
ನೆರಳು
ದಣಿವಾದ ದೇಹಕೆ ಬೇಕಿದೆ ಹೊಂಗೆಯ ತಂಪಿನ ನೆರಳು,
ಕಾಯುವರು ನೆರಳಿನಂತೆ ಸದಾ, ಜೊತೆಗಿರುವ ನಮ್ಮ ಆತ್ಮೀಯರು...!
ಕಾಯುವ ನೆರಳೇ ಆಗಬಲ್ಲದು, ಕೆಲವೊಮ್ಮೆ ಕಾಡುವ ನೆರಳು,
ಕಾಯುವ ಕೈಗಳೇ ಕೆಲವೊಮ್ಮೆ ಕೊಲ್ಲುವವು ನಮ್ಮ ಕನಸುಗಳನ್ನು...!
ಗತಕಾಲದ ನೆನಪುಗಳು ಅದೇಕೋ ಬಿಡದೆ ಕಾಡುತಿವೆ ನಮ್ಮನ್ನು,
ಜೀವನದ ಪಯಣದಲಿ ಜೊತೆಯಾಗಿವೆ ನೆರಳಿನಂತೆ ಈ ನೆನಪುಗಳು...!
ಸುಟ್ಟು ಕರಕಲಾಗಲಿ ನೆರಳಿನಂತೆ ಕಾಡುವ ಕೆಟ್ಟ ಕನಸುಗಳು,
ಜ್ಯೋತಿಯಂತೆ ನಿತ್ಯ ಬೆಳಗುತಿರಲಿ ಖುಷಿ ಕೊಡುವ ಸುಂದರ ನೆನಪುಗಳು...!
