STORYMIRROR

Achala B.Henly

Children Stories Classics Children

4  

Achala B.Henly

Children Stories Classics Children

ಪುಟ್ಟನ ಬೆಕ್ಕು

ಪುಟ್ಟನ ಬೆಕ್ಕು

1 min
405


ಪುಟ್ಟನ ಬೆಕ್ಕು ಪುಟ್ಟನಂತೆಯೇ 

ಬಲು ತುಂಟಾಟ ಜಾಸ್ತಿ,

ಎಲ್ಲೆಂದರಲ್ಲಿ ಏನಾದರೂ ಸಿಗಲಿ

ಅಂದುಕೊಳ್ಳುತ್ತದೆ ಎಲ್ಲವೂ ತನ್ನದೇ ಆಸ್ತಿ..!!


ಪುಟ್ಟ ಮತ್ತು ಬೆಕ್ಕಿನ ಜೋಡಿ

ಮಾಡಿದೆ ಮನೆಯವರೆಲ್ಲರಿಗೂ ಮೋಡಿ,

ಇಬ್ಬರ ಜೋಡಿ ಬಂತೆಂದರೆ ಅಲ್ಲೇನೋ

ಚಮತ್ಕಾರ ನಡೆಯಲಿದೆ ಎಂಬುದಂತೂ ಖಾತರಿ..!!


ಎರಡು ಮುದ್ದು ಕಂದಮ್ಮಗಳನ್ನು

ನೋಡುವುದೇ ಕಣ್ಣಿಗೆ ಚೇತೋಹಾರಿ,

ಆದರೆ ಅವರಿಬ್ಬರು ತಂದಿಡುವ

ಕಷ್ಟಗಳನ್ನು ನೆನೆದರೆ ಆಗುತ್ತದೆ ಗಾಬರಿ..!!


ಪುಟ್ಟನ ಹಿಂದೆಯೇ ಹೊರಡುತ್ತದೆ

ಪ್ರತಿನಿತ್ಯವೂ ಬೆಕ್ಕಿನ ಸವಾರಿ,

ಅವನಿದ್ದೆಡೆ ತಾನಿರಲೇಬೇಕೆಂಬ ನಿಯಮವನ್ನು ಹಾಕಿಕೊಂಡಿದೆ

"ನಮ್ಮ ಮನೆಯ ಬಿಲ್ಲಿ..!!"



Rate this content
Log in