ಹಣತೆ
ಹಣತೆ
ಅರೇ ಓ ಕೇಳು ಮಾನವನೇ,
ಕಿಚ್ಚಿನ ಕಿಡಿಯಲಿ ಬೂದಿಯಾಗದೇ
ಬೆಳಕನು ಹೊತ್ತಿಸಿ ನೋಡು ಬೆಳಗುವುದು..!
ಪರರು ಹಚ್ಚಿದ ಕಿಡಿಗೆ, ನೀ ಏಕೆ ಬಲಿಯಾಗುವೆ..?
ಹಣತೆಯಂತೆ ಬಾಳಿ,
ಎಲ್ಲರಿಗೂ ನೆರಳಿನಂತೆ ಬದುಕಬಾರದೇ ನೀ ಸುಮ್ಮನೆ..!
ಹಚ್ಚುವವರು ಹಚ್ಚಲಿ ಕಿಚ್ಚನು,
ಅದಕೆ ಎಣ್ಣೆಯ ಸುರಿಯದೇ,
ತಾಳು ನೀ ತಾಳ್ಮೆಯನು ಎಂದೆಂದಿಗೂ..!
ಸಿಕ್ಕ ಬೆಂಕಿಯಲಿ ಪರರನ್ನು ಸುಡಬಹುದು
ಇಲ್ಲವೇ, ಅನ್ನವನ್ನು ಬೇಯಿಸಬಹುದೆಂದು
ತಿಳಿದು, ಸತ್ಕಾರ್ಯಗಳನು ಮಾಡುತಾ
ಹೊತ್ತಿಸು ಹಣತೆಯನು ಎಂದೆಂದಿಗೂ..!
ಆಡುವವರು ಆಡುತ್ತಾರೆ, ಆಡಲಿ ಬಿಡು
ಅವರು ಏನನ್ನಾದರೂ..! ಬೇಸರಿಸದೇ ಸಾಗು
ನೀ ಬದುಕಲಿ ಮುಂದೆ ಮುಂದೆ ಯಾವಾಗಲೂ..!
