ಬಾಲ್ಯ ಮಳೆಯಲ್ಲಿ ಬೆರೆತಾಗ. !!!
ಬಾಲ್ಯ ಮಳೆಯಲ್ಲಿ ಬೆರೆತಾಗ. !!!
ಬಾಲ್ಯ ಮಳೆಯಲ್ಲಿ ಬೆರೆತಾಗ. !!!
ಜಡಿಮಳೆಯ ಮಡಿಲಲ್ಲಿ
ಜಗುಳಿಯೆದುರ ಕೆಸರಲ್ಲಿ
ಕೈ ಕೈಬಿಗಿ ಹಿಡಿದು
ಕುಣಿದು ಕುಪ್ಪಲಿಸಿದ್ದೆವು
ಅಟ್ಟಾಡಿಸೊ ಆಟವಾಡಿ
ಅಂಗೈಲಿ ನೀರೆಸೆದು
ಹಾಲೆ ಹರಿದು ದೋಣಿ ಮಾಡಿ
ಮನಕ್ಕೆ ಬಂದ ಹಾಡು ಹಾಡಿ
ನಂದು ಮುಂದು
ನಂದು ಮುಂದೆಂದು ಕೂಗಾಡಿದೆವು
ಮನೆ ಬಾಗಿಳಿಂದ ಅವ್ವನ ಕೂಗು
ಮಳೆಯಾಟ ಬಿಟ್ಟು
ಹೋಗಳೆ. ನಾ ಹೇಗೂ
ತಾಯಿಯ ಕರೆಯು ಕಿವಿಗಟ್ಟದೆ
ಪಾಚಿಯ ಕೆಸರೋಳೋಡಾಡಿದೆ
ಓಡಿದ ರಭಸಕ್ಕೆ ಬಿದ್ದು ಬಿಟ್ಟೆ
ನಗು ನೋಡಿ ಗೆಳೆಯರ
ಮನೆಕಡೆಗೆ ಹೊರಟೆ
ಮೊಲೆ ಕುಡಿಯಲರಿಯದ ಮಗುವಂತೆ
ತಾಯಿ ಎದುರು ನಿಂತು ಬಿಟ್ಟೆ
ತಚ್ಚೆದೆಯಲ್ಲಿ ಗೋಗರೆದಳು
ಏನಿದು ನಿನ್ನ ಬಟ್ಟೆ?
ಏನೊಂದೊ ಹೇಳಲೊರಟೆ
ಬಿತ್ತೇಟು ಕೆನ್ನೆಗೆ ಸಿಕ್ಕಪಟ್ಟೆ!!