ಏಕೆ ಹಾಕಿದೆ ಆಶ್ರಮಕ್ಕೆ ?
ಏಕೆ ಹಾಕಿದೆ ಆಶ್ರಮಕ್ಕೆ ?
ಪಾಪೂ ಎಂದು ಕರೆದು
ಪಾಲನೆಯ ಹಾದಿ ತೆರೆದು
ಕೆಲವೊಮ್ಮೆ ನನಗಾಗಿ
ಊಟವು ಬಿಟ್ಟಿದ್ದೆ
ಆಟವೂ ಆಡಿದ್ದೆ
ನಿದ್ದೆ ಬಿಟ್ಟು, ನನ್ನ ಸೂಸಿನಿಂದ
ಒದ್ದೆಯೂ ಆಗಿದ್ದೆ
ಕ್ಷಮಿಸು ಋಣ ತೀರಿಸಲು
ನನ್ನಿಂದ ಸಾಧ್ಯವಿಲ್ಲ
ನಿನ್ನ ಸಲಹಲು
ಸೊಸೆ ರೊಸಿ ಹೋದಳು
ನಾನೊಬ್ಬ ಮೂರ್ಖ
ತಮ್ಮ ಮಗನೆಂಬ ಮಾತೇ ಮರೆತು
ಆಶ್ರಮಕ್ಕೆ ಹಾಕಿದೆ
ಅರ್ಥಯ್ತು
ಈ ಬದುಕೇ ನೀ ಕೊಟ್ಟ
ಭಿಕ್ಷೇ.........!!!!!!
