ಕರುನಾಡ ಕನ್ನಡವೇ ಉಸಿರು
ಕರುನಾಡ ಕನ್ನಡವೇ ಉಸಿರು
ಮನೆ ನಿಂದು ಕನ್ನಡ
ನನ್ನ ಮನದೋಲು
ಕೇಳೋರ್ಗೆ ಈ ಭಾಷೆ
ಸವಿಹನಿಯ ಸವಿದಂತೆ
ಹರಿಯೋ ನದಿಗಳ ಕುಣಿತದ ಅಂದ
ಅರಳೋ ಪುಷ್ಪಗಳ ಮಾಧುರ್ಯದ ಗಂಧ
ಕೈ ಬಿಚ್ಚಿಕ್ಕಿದೆ ಪುಣ್ಯ ಕರುನಾಡಕುದ್ದ
ಕನಕ,ಪುರಂದರು ಹೊಗಳಿದ ನಾಡು
ರನ್ನ ,ಪೊನ್ನರ ನೆಚ್ಚಿನ ಬೀಡು
ಬಹುಮಾನಿ,ಹೊಯ್ಸಲ ಆಳಿದ ಸೂರು
ನಮ್ಮೀ ...... ಕರುನಾಡು
ಭತ್ತವು ಬಿತ್ತುವ ರೈತರ ತವರು
ಹಸಿರು ಚಾಪೆಯ ಸುಂದರ ಮಡಿಲು
ಓಕುಲಿಯಾಡುವ ಮುಗಿಲಿನ ಆಟ
ಕಾಲೆತ್ತಿ ಕುಣಿಯೋ ನವಿಲಿನ ನೃತ್ಯ
ಕನ್ನೆರೆಡು ಸಾಕದು ನೋಡೋಕ್ ಭಾಗ್ಯ
ಧ್ವಿವರ್ಣ ಪತಾಕೆ ಮೇಲಕ್ಕೆತ್ತು
ಹಾಲ್ಮಿಡಿ ಶಾಸನ ನಂಗಿದು ಗತ್ತು
ಕನ್ನಡ ಮಣ್ಣಿನ ಮುದ್ದಿನ ಮಗುವೇ
ಕನ್ನಡ ಸುಗಂಧ ಜಗದುದ್ದಚ್ಚು
