ಬದಲಾವಣೆ ಸಮಯ
ಬದಲಾವಣೆ ಸಮಯ
ಸಮುದ್ರ ದಡದಲ್ಲಿ ಕುಳಿತಿರುವೆನು ಗೆಳೆಯ
ನೀ ಮಾಡಿರುವ ಮೋಸವ ನೆನೆದು
ನೀನಿಲ್ಲದೆ ನಗುತಿರುವೆನು ಇನಿಯ
ಒಳಗಿರುವ ನೋವನ್ನೆಲ್ಲಾ ಬಿಗಿದು!!
ಕಣ್ಣಂಚಲಿ ಇರುವ ಹನಿ ಕೊರಗಿದೆ
ಒಳಗೆ ಇರಲಾರದೆ ಹೊರಗೆ ಬರಲಾರದೆ
ಕಣ್ಣೀರೇ ಅಳುತಿದೆ
ಏನೆಂದು ಸಮಾಧಾನಿಸಲಿ ಗೆಳೆಯ!!
ಬಾನಲ್ಲಿ ಇರುವ ಮೋಡ ನಗುತ್ತಾ ಹೇಳಿತು
ನಾನು ಅತ್ತರೆ ಬಾನಿಂದ ದೂರವಾಗುವೆನು
ಭೂಮಿಯ ಅನುಮತಿ ಪಡೆದು
ಮತ್ತೆ ಬಾನಲ್ಲೇ ತೆಲಾಡುವೆ ಎಂದು ಹೇಳಿತು!!
ಕಣ್ಣೀರು ಅಳುವುದನ್ನು ನಿಲ್ಲಿಸಿಬಿಟ್ಟಿತು
ಕಣ್ಣುಗಳು ರೆಪ್ಪೆಯ ಮುಚ್ಚುತ್ತಲೇ
ಹನಿಗಳು ಭೂಮಿಯ ಸೇರಿದವು
ಮಣ್ಣಲ್ಲಿ ಕರಗಿ ಒಂದಾದವು!!
ಸೂರ್ಯಾಸ್ಥವಾಗಿದೆ ಕತ್ತಲಿಂದ ಕೂಡಿದೆ
ನಿನ್ನ ನೆನಪೆಲ್ಲವ ಸಮುದ್ರದಲ್ಲಿ ಬಿಟ್ಟು
ಕಣ್ಣೀರನ್ನು ದಡದ ಬದಿಯಲ್ಲಿ ಸುಟ್ಟು
ಕಾಲು ಮನೆಯ ಕಡೆ ಹೆಜ್ಜೆ ಹಾಕಿ ಹೊರಟಿದೆ!!
