ದಾರಿ ತಪ್ಪಬೇಡ ಮಗಳೇ
ದಾರಿ ತಪ್ಪಬೇಡ ಮಗಳೇ


ಭರತನಾರಿ ಎಂದರೆ ಹೆಮ್ಮೆ
ವಿಶ್ವವೇ ಕೈಮುಗಿದು ನಿಂತಾಗ
ಅವಳು ಪರಮಪಾವನಳು ಎಂದೆಂದಿಗೂ
ಆದರಿಂದು ಮತ್ತಿನ ಗುಂಗಿನಲ್ಲಿ
ಆಪತ್ತಿನ ಸರಮಾಲೆಯೆದುರು
ತುತ್ತು ಮತ್ತಿಗಾಗಿ ಕಾದು ಕುಳಿತೆಯಲ್ಲ
ಚಟವೆಂಬ ಗಂಟನು ಹಿಡಿದು
ಸೋಮರಸದ ದಾಸನಾಗಿ
ಅಮಲಿನ ಲೋಕಕ್ಕೆ ಅಧಿಪತಿಯಾಗಿಹೆಯ.....
ದೇಶವೇ ಪರಿತಪಿಸುತಿದೆ
ಸೋಲಿನ ಕುಣಿಕೆಯೆದುರು
ಕತ್ತು ಬಗ್ಗಿಸಿದೆ ಮಹಾಮಾರಿಯೆದುರು........
ಜೀವನದ ಸ್ವಚ್ಚಂದ ಓಟದಲ್ಲಿ
ತಂತ್ರಜ್ಞಾನದ ಮಿತಿಮೀರಿದ ಆಟದಲಿ
ಆಸೆಯ ವ್ಯೂಹದೊಳಗೆ ಬಂಧಿಯಾದೆಯ.....
ಹೆಣ್ಣೆಂಬ ಮುಗ್ದ ಮನಸ್ಸು
ಬೆಣ್ಣೆಯಂತಹ ಪರಿಶುದ್ಧ ಮನಸು
ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ......
ಭರತಮಾತೆ ಕರೆಯುತಿಹಳು
ಕೇಳಿಲ್ಲಿ ಹೆತ್ತ ತಾಯಿಯಂತೆ
ತನ್ನ ಹೆಣ್ಣುಮಕ್ಕಳ ನೋಡಿ ಕಣ್ಣೀರಿಡುತಿರೇ........
ದಾರಿತಪ್ಪಬೇಡ ಮಗಳೇ
ಕೈಗೆ ಸಿಗದು ಕಾಮನಬಿಲ್ಲು
ನನ್ನ ಕಂದ ಕಣ್ಮಣಿ ನೀ ಹಠವ ಮಾಡದೆ.......