ಸ್ವತಂತ್ರವಾಗಿದೆ ಬದುಕು
ಸ್ವತಂತ್ರವಾಗಿದೆ ಬದುಕು
ಸ್ವತಂತ್ರ ಭಾರತದ ಕನಸು ತೊಟ್ಟ ಹಲವರು.....
ಈ ದೇಶಕಾಗಿ ದುಡಿದರು
ಕೊನೆಗೆ ನಮಗಾಗಿ ಮಡಿದರು....
ತಮ್ಮ ಆಸೆ ಆಕಾಂಕ್ಷೆಗಳ ಬದಿಗೊತ್ತಿದವರವರು....
ಪ್ರೀತಿ ಮಮತೆಯ ಕೈತುತ್ತ
ದೇಶಕಾಗಿ ಭವಿಷ್ಯಕಾಗಿ ಮರೆತರು...
ಅದರ ಫಲವೀಗ ನಾವೆಲ್ಲರೂ ಸ್ವತಂತ್ರರು
ತಿನ್ನೋ ಅನ್ನ,ಉಡೋ ಬಟ್ಟೆ ಎಲ್ಲಾ..
ಜೀವಿಸುವ ಈ ಜೀವನದಲ್ಲಿ...
ನಿಜವಾಗಿ ಸ್ವಾತಂತ್ರವೆಂದೇರೇನೆಂದರಿಯದವರು
ನಾವೆಲ್ಲರೂ ದಿನದೂಡುತ್ತಿದ್ದೇವೆ
ಹುಚ್ಚು ಭ್ರಮೆಯಲ್ಲಿ...
ತನ್ನಿಷ್ಟಕ್ಕೆ ತಿನ್ನುವುದು.. ತನ್ನಿಷ್ಟಕ್ಕೆ ಬದುಕುವುದು
ಇದು ಸ್ವಚಂದ ಬದುಕಿನ
ಕಲ್ಪನೆಯೇ ಇಲ್ಲಿ
p>ಪರರ ನೋಯಿಸದೆ ಬದುಕುವಾಗ..
ನೀತಿ ನ್ಯಾಯದ ಚೌಕಟ್ಟಿನಲಿ
ಸತ್ಯ ನಿಂತಿರುವಾಗ..
ಇದ್ದ ಸಂಪತ್ತಿನಲಿ ತೃಪ್ತಿಯಲಿ ಉಣ್ಣುವುದೇ
ಪರರ ಸೊತ್ತಿಗೆ ಆಸೆ ಪಡದೆ
ನೀ ನಡೆಯುವಾಗ...
ಸಿಕ್ಕಿದ ಬದುಕಿನಲಿ ಪರರ ಹಂಗಿಲ್ಲದೆ ನೀನಿರರಲು
ತಿನ್ನೋ ತಂಗಳನ್ನವಾದರು
ಮೃಷ್ಟಾನ್ನದಂತೆ..
ಬದುಕ ಬಂಡಿಯ ಮೇಲೆ ಕೆಟ್ಟ ದೃಷ್ಟಿ ಬೀಳದೆ..
ಸುಗಮವಾಗಿ ಸಾಗುತಿರೇ..
ಹಾಸಿಗೆ ಇದ್ದಷ್ಟು ಕಾಲು ಚಾಚುವಾಗ...
ಸ್ವತಂತ್ರವಾಗಿದೆ ಬದುಕು...ಈಗ ನಮ್ಮದು
ಪ್ರತಿ ನಿರ್ಧಾರಗಳು ನಮ್ಮದೇ ಇಲ್ಲಿ
ಸತ್ಯದ ತಳ ಹದಿಯಲ್ಲಿ.....
ನೀತಿ ನ್ಯಾಯವಿದೆ ಇಲ್ಲಿ
ನಮ್ಮ ಬದುಕಿನಲ್ಲಿ...