ಆಪತ್ತು
ಆಪತ್ತು


ಹಳದಿ, ಹಸಿರು, ಕೆಂಪು, ಕಿತ್ತಳೆ
ರಾಜ್ಯಕ್ಕಾಗಿ ರಾಷ್ಟ್ರಕ್ಕಾಗಿ ಬೇರೆ ಬೇರೆ ಬಣ್ಣ
ಮನೆಯಲ್ಲೇ ಇದ್ದಿದ್ದರೆ ಬಾವುಟಗಳೆಲ್ಲವೂ ಹಸಿರುಮಯವಾಗುತಿತ್ತು ಅಣ್ಣ
ಜಾತಿಭೇದವಿಲ್ಲದೇ ತೋರಿದೆ ಕರೋನಾ ತನ್ನ ಪ್ರೀತಿ
ಪ್ರತಿಯೊಬ್ಬ ಮಾನವನಿಗೆ ಕಾಡಿದೆ ಜೀವದ ಭೀತಿ
ತಂತ್ರಜ್ಞಾನ ಮುಂದುವರಿದರೂ ಮದ್ದು ಕಂಡು ಹಿಡಿಯಲಾಗದೇ ಒದ್ದಾಡುತ್ತಿದೆ ಜಗತ್ತು
ನಮ್ಮ ಜಾಗ್ರತೆಯಲ್ಲಿ ನಾವಿದ್ದು ದೂರ ಮಾಡಬೇಕು ವಿಶ್ವದ ಆಪತ್ತು
ಆದಷ್ಟೂ ಮನೆಯಲ್ಲಿದ್ದು ಮೊದಲು ನಮ್ಮನ್ನು ರಕ್ಷಿಸೋಣ
ಲಾಕ್ ಡೌನ್ ಯಶಸ್ವಿಯಾಗುವಂತೆ ಮಾಡೋಣ
ಪಾತಾಳಕ್ಕೆ ಕುಸಿದ ಆರ್ಥಿಕತೆಯನ್ನು ಮೇಲಕ್ಕೆ ಎತ್ತೋಣ
ವಿಶ್ವಗುರುವಿನಂತೆ ಪ್ರಪಂಚದಾದ್ಯಂತ ಭಾರತದ ಕೀರ್ತಿ ಪತಾಕೆ ಎತ್ತಿಹಿಡಿಯೋಣ