ಪ್ರೇರಣೆ
ಪ್ರೇರಣೆ


ಯಾರಿಗೂ ಯಾರೂ ಇಲ್ಲದ ಜೀವನದಲ್ಲಿ ಬೇಸತ್ತು ಏಕಾಂಗಿಯಾಗಿ ಕೂತಿದ್ದೆ ನಾನು;
ನೋವುಗಳಿಗೆ ಸ್ಪಂದಿಸುವ ಸಂತೋಷದಲ್ಲಿ ಬಾಗಿಯಾಗುವ ಗೆಳತಿಗಾಗಿ ಕಾದಿದ್ದೆ ನಾನು!
ವಿದೇಶದಿಂದ ನಿಮ್ಮ ಅಭಿಮಾನಿ ಎಂಬ ಸಂದೇಶ ಒಂದು ದಿನ ಬಂತು;
ಕಲ್ಮಶ ತುಂಬಿದ ಜಗದಲಿ ಯಾರನ್ನು
ಹೇಗೆ ನಂಬಲಿ ಅನಿಸಿತು!
ಸ್ನೇಹದ ಹೆಸರಿನಲ್ಲಿ ಈ ಜಗದಲಿ
ಲಾಭ ಬಯಸುವವರೇ ಹೆಚ್ಚೆಂದು ಬೆದರಿದೆ;
ಕಡೆಗೊಂದು ದಿನ ನನ್ನಿಂದ ನಿಸ್ವಾರ್ಥ ಸ್ನೇಹವನ್ನು ಮಾತ್ರ ಆಕೆ ಬಯಸುವಳೆಂದು ತಿಳಿದೆ!
ಬರಹಗಳನ್ನು ಪ್ರೋತ್ಸಾಹಿಸುತ್ತಾ ನಾವಿಬ್ಬರೂ ಆತ್ಮೀಯರಾದೆವು;
ಯೋಗಕ್ಷೇಮ ವಿಚಾರಿಸುತ್ತಾ
ಸುಖ ದುಃಖ ಹಂಚಿಕೊಂಡೆವು!
ಪ್ರೇಮಿಗಿಂತ ಹೆಚ್ಚಾಗಿ ಪ್ರೀತಿಸುವ, ಆಗಾಗೇ ರೇಗಿಸುವ ಗೆಳತಿಯವಳು;
ಸೋತಾಗ ಸಮಾಧಾನ ಮಾಡುವ
ಶುದ್ಧ ಮನಸ್ಸಿನ ಒಡತಿಯವಳು!
ಹೆಸರೇ ಸೂಚಿಸುವಂತೆ ನನ್ನ ಸಾಹಿತ್ಯ ಲೋಕಕ್ಕೆ ಪ್ರೇರಣೆಯಿವಳು;
ಸದಾ ಉತ್ಸಾಹದ ಬುಗ್ಗೆ, ಸ್ಪೂರ್ತಿಯ ಚಿಲುಮೆಯಿವಳು!