ಸಂಕ್ರಾಂತಿ
ಸಂಕ್ರಾಂತಿ


ಉತ್ತರ ದಿಕ್ಕಿನತ್ತ ಸೂರ್ಯನ ಪಯಣ
ಧನಸ್ಸಿನಿಂದ ಮಕರ ರಾಶಿಗೆ ಅವನ ಯಾಣ
ಪರ್ವಕಾಲದ ಈ ಶುಭಗಳಿಗೆಯೇ ಉತ್ತರಾಯಣ
ಮಕರ ಸಂಕ್ರಮಣದಂದು ಪಂದಳದ ಕಂದನಿಗೆ ಅಲಂಕಾರದ ಯೋಗ
ಅಯ್ಯಪ್ಪನ ದರುಶನಕ್ಕಾಗಿ ಬರಿಗಾಲಲ್ಲಿ
ನಡೆಯುವುದೇ ಯಾಗ
ಶಬರಿಮಲೆಯಲಿ ಜ್ಯೋತಿ ರೂಪದಲ್ಲಿ ಅವನ ಕಾಣುವುದೇ ನಮ್ಮ ಸುಯೋಗ
ಕೊರೆವ ಚಳಿ ಮರೆಯಾಗಿ ಹಗಲು ಹೆಚ್ಚಾಗಲು
ರೈತಾಪಿಜನರ ಸಂಭ್ರಮ ಮುಟ್ಟುವುದು ಮುಗಿಲು
ಎಳ್ಳು ಬೆಲ್ಲದ ಸಂಕ್ರಾಂತಿ ಹಬ್ಬವ ಆಚರಿಸಲು
ಬಾಗಿಲ ಮುಂದೆ ಅಂದದ ರಂಗೋಲಿಯನಿಟ್ಟು
ಎಳ್ಳೆಣ್ಣೆಯ ಮಜ್ಜನವ ಮಾಡಿ ಮಡಿಯುಟ್ಟು
rong>ತಳಿರು ತೋರಣದಿ ಮನೆಯ ಸಿಂಗರಿಸೋಣ ಎತ್ತುಗಳ ತೊಳೆದು ಸುಂದರವಾಗಿ ಅಲಂಕರಿಸಿ ಗೋವುಗಳ ನಮಿಸಿ ಗದ್ದೆಯಲ್ಲಿ ಕಿಚ್ಚನ್ನು ಹಾಯಿಸಿ ಬಂಧು ಬಾಂಧವರ ಜೊತೆ ಹುಗ್ಗಿಯ ಸವಿಯೋಣ ಕಣ್ಣಿಗೆ ನಿದ್ದೆಬಿಟ್ಟು ಕಾದಿದ್ದ ಹಗಳಿರುಳಿನ ಶ್ರಮಕ್ಕೆ ಫಸಲು ಪಡೆದು ಕಣಜ ತುಂಬಿದ ಸಂತಸಕ್ಕೆ ಪೈರನ್ನು ಹೊತ್ತ ಭೂಮಿತಾಯಿಗೆ ನಮಿಸೋಣ ಮಳೆ ಬೆಳೆ ಕಾಲಕಾಲಕ್ಕೆ ಬರಲಿಯೆಂದು ಆ ಪ್ರಕೃತಿ ಮಾತೆಯ ಕೇಳುತಾ ಸುಖ ಶಾಂತಿ ಸಮೃದ್ಧಿ ಕರುಣಿಸೆಂದು ಮುಕ್ಕೋಟಿ ದೇವರ ಬೇಡುತಾ ಸಕ್ಕರೆ ಗೊಂಬೆ ಬೆಲ್ಲದಚ್ಚಿನ ಜೊತೆ ಎಳ್ಳು ಬೆಲ್ಲವ ಹಂಚಿ ಸವಿ ಮಾತುಗಳನ್ನಾಡೋಣ