ವೈದ್ಯರಿಗೊಂದು ನಮನ
ವೈದ್ಯರಿಗೊಂದು ನಮನ
ಬೇಕರಿ ತಿಂಡಿ, ರೆಡಿ ಟು ಇಟ್ ತಿನ್ನುವ ಭಾಗ್ಯ
ವಯಸ್ಕ ಮಕ್ಕಳೆಂಬ ಭೇದವಿಲ್ಲದೆ ಹೆಚ್ಚಾಗುತಿದೆ ಅನಾರೋಗ್ಯ
ಒತ್ತಡದ ಬದುಕಿನಲ್ಲಿ ಮಾಡಲಾಗುತ್ತಿಲ್ಲ
ಹೊತ್ತು ಹೊತ್ತಿಗೆ ಊಟ
ಇದರಿಂದ ಶುರುವಾಗಿದೆ ಹೊಸ ಹೊಸ
ರೋಗದ ಕಾಟ
ರೋಗಿಯ ಹೃದಯದ ಬಡಿತ ನಾಡಿ ಮಿಡಿತ ಗಮನಿಸಿ ಖಾಯಿಲೆ ಗುಣಪಡಿಸುವ ವೈದ್ಯರಿವರು
ದೇಶವ ಕಾಯುವ ವೀರ ಸೈನಿಕರಂತೆ
ದೇಹದ ರಕ್ಷಿಸುವ ವೀರ ಯೋಧರಿವರು
ಹಗಲು ರಾತ್ರಿ ರೋಗಿಯ ಸೇವೆಯ ಮಾಡುವ
ಇವರಿಗೆ ಬಿಡುವಿಲ್ಲ
ರೋಗಗಳಿಂದ ಮುಕ್ತಗೊಳಿಸಿ ಮುಖದಲಿ ನಗು ತರಿಸುವ ಇವರಿಗೆ ಸಮಾನರು ಯಾರಿಲ್ಲ
ವೈದ್ಯರ ಸೇವೆಯ ಸ್ಮರಿಸೋಣ
ಅವರ ನಿಸ್ವಾರ್ಥ ಸೇವೆಗೆ ನಮಿಸೋಣ
