ಆಂತರ್ಯ
ಆಂತರ್ಯ

1 min

237
ನನ್ನವಳಗಲಿದಾಗ
ನನಗೆಲ್ಲವೂ ನಶ್ವರ
ದಾರಿಕಾಣದಾಗಿ
ದಿನದೂಡಲು ದಿಗ್ಬ್ರಮೆ
ಒಂಟಿತನದ ಒದ್ದಾಟ
ಹಾಗೇ ಹತ್ತಿರವಾಗಿದ್ದು
ನಾನೆಂದೂ ನಂಬದ
ಮಾಂತ್ರಿಕ ಮೊಬೈಲ್
ಕೆದಕುತ್ತಿರುವಾಗ ಕಂಡೆ
ನನ್ನ ನೆಚ್ಚಿನ ನವ್ಯ
ಸಾಹಿತಿ ಸಾಹಿತ್ಯ
ಕಥಾ ಕವನಗಳ ಕೂಟ
ಕೊನೆಗೆ ಕಂಡದ್ದು
ಮನಕ್ಕೆ ಮುದ
ಚಿರ ಚೈತನ್ಯ
ಬದುಕಿನ ಬೆಳಕು