ನಮ್ಮ ಮನೆಯ ಜೇನು ಮರ
ನಮ್ಮ ಮನೆಯ ಜೇನು ಮರ


ನಮ್ಮ ಮನೆಯ ಎದುರಿಗಿತ್ತು ಒಂದು ಮರ
ಅದರ ಹೆಸರಾಗಿತ್ತು ಜೇನು ಮರ
ಜೇನು ಸಂಗ್ರಹಿಸುತ್ತಿದ್ದರು ದೊಡ್ಡ ಪಾತ್ರೆಗಳಲ್ಲಿ
ಚಿಕ್ಕ ಜೇನುರಟ್ಟಿನ ಚೂರುಗಳಿರುತ್ತಿದ್ದವು ನಮ್ಮ ಕೈಗಳಲ್ಲಿ
ಏನು ಕಾರಣವೋ ಸರಿಯಾಗಿ ಗೊತ್ತಿಲ್ಲ
ಆದರೆ ಆ ಹೆಜ್ಜೇನುಗಳು ಆ ಮರದತ್ತ ಸುಳಿಯುತ್ತಿಲ್ಲ
ಈಗ ಸವಿಯಲು ಸಿಗುತ್ತಿರುವುದು ಪೆಟ್ಟಿಗೆ ಜೇನು ಮಾತ್ರ
ಹೆಜ್ಜೇನಿನ ಸವಿ ಉಳಿದಿರುವುದು ನೆನಪಿನ ಪುಟಗಳಲ್ಲಿ ಮಾತ್ರ
ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು
ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್ದೆವು
ಆ ಮರಕ್ಕೆ ಹಲವು ಜೇನುಗೂಡುಗಳಿರುತ್ತಿದ್ದವು
ಟೊಂಗೆಯ ತುದಿಯಲ್ಲಿರುವ ಕೆಲವು ಜೇನುಗೂಡುಗಳು ಉಳಿಯುತ್ತಿದ್ದವು
ಬ್ರೀಟೀಷರ ಕಾಲದಲ್ಲೇ ಜೇನುಮರವಾಗಿದ್ದ ಮರ
ಈಗ ಉಳಿದಿದ್ದು ಬರೀ ಮರ
ಆ ಹೆಜ್ಜೇನುಗಳು ಈಗ ಕಾಣೆಯಾಗಿವೆ
ನೆನಪಿನ ಪುಟದಲ್ಲಿ ಮಾಸದೆ ಹಾಗೇ ಉಳಿದಿವೆ