STORYMIRROR

Kalpana Nath

Tragedy Others

4  

Kalpana Nath

Tragedy Others

ಮನದ ಮಾತು

ಮನದ ಮಾತು

1 min
40


ಬಾಲ್ಯದ ಸಹಜ ಸುಖಕಾಣದೆ 

ತಾರುಣ್ಯದ ಆಸೆಗಳ ಹೇಳಲಾಗದೆ

ದೊಡ್ಡವರ ಮಾತು ಮೀರಲಾಗದೆ 

ನಮ್ಮ ಮನೆ ಸೇರಿದ್ದು ತಿಳಿದಿದೆ 


ಸುಖವಾಗಿರಲೆನ್ನುವಾಸೆ ಎನ್ನದಾದರೂ 

ಕಷ್ಟದ ನೆನೆಪುಗಳೇ ನಿಮ್ಮನ್ನ ಕಾಡಿತ್ತು

ಸಂಸಾರದ ಹೊರೆ ಮಕ್ಕಳ ಪೋಷಣ

ನಾದಿನಿ ಮದುವೆ ಎಲ್ಲವೂ ನಿಮ್ಮದಾಯ್ತು 


ಹೊಗಳುವಂತೆ ಎಲ್ಲವ ನಿಭಾಯಿಸಿ 

ಸುಖದ ದಿನಗಳು ಕಾಣುವಾಗ 

ಬಾರದ ಲೋಕಕ್ಕೆ ಹೊರಟು ಬಿಟ್ಟಿರಿ 

ಬರೀ ನೆನೆಪುಗಳೇ ನೀವಿಲ್ಲದಾಗ 


ಅನ್ಯರ ಅರಿವಿಗೆ ಬಾರದoತೆ 

ಕಷ್ಟಗಳ ದಿನಗಳ ಕಳೆದಿರಿ 

ಮಕ್ಕಳು ಮೊಮ್ಮಕ್ಕಳ ಎದುರು 

ನೋವ ಮರೆವುದ ಕಲಿತಿರಿ 


ಒಂದಿಲ್ಲೊಂದು ಅನಾರೋಗ್ಯ

ಕಾಡಿದಾಗ ನೀವು ಎದೆಗುಂದಲಿಲ್ಲ 

ನಿತ್ರಾಣವಾಗಿ ಸಹಾಯ ಪಡೆವಾಗ 

ಕಣ್ಣೀರ ಹರಿಸಿ ಮೌನವಾದಿರಲ್ಲ 


ನರಕದ ಕದ ತಟ್ಟಿ ಬಂದಿರುವೆ 

ಸ್ವಲ್ಪ ಸಮಯಕೊಡಿ ಎಂದಾಗ 

ಮನನೊಂದು ಮಾತನಾಡಲಿಲ್ಲ 

ಅದೇ ನಿಜವಾಗಿ ನೊಂದೆ ನಾನಾಗ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy