ಜೀವನದ ಆಟ
ಜೀವನದ ಆಟ

1 min

23K
ಬಾಲ್ಯದಲ್ಲಿ ಅಮ್ಮನಿಂದ ಆಟ,ಊಟ,ಓಟಗಳ
ಪರಿಪಾಟ.
ಕೌಮಾರ್ಯದಲ್ಲಿ ಸ್ನೇಹಿತರ ಜೊತೆ ಸಂತಸದ
ಒಡನಾಟ.
ಯೌವ್ವನದಲ್ಲಿ ಒಳ್ಳೆಯ ಬಾಳ ಸಂಗಾತಿಗಾಗಿ
ಹುಡುಕಾಟ.
ಗೃಹಸ್ಥಾಶ್ರಮದಲ್ಲಿ ವಿವಾಹಾ ನಂತರ ಪತಿ/ತ್ನಿ
ಸರಸದಾಟ.
ಮನೆಯಲ್ಲಿ ಮಕ್ಕಳಿಗಾಗಿ ದೈವ ಕೃಪೆಗಾಗಿ ಮೊರೆ
ಹೋಗಾಟ.
ದೊಡ್ಡವರಾದಂತೆ ಸಂಜಾತರ ಭವಿಷ್ಯದ ಬಗೆಗಿನ
ಹಾರಾಟ.
ವಯಸ್ಸಿನಲ್ಲಿ ಬದುಕಿಗಾಗಿ ದಿನ ನಿತ್ಯದ ದುಡಿತದ
ಹೋರಾಟ.
ಮುಪ್ಪಿನಲ್ಲಿ ರೋಗ ರುಜಿನಗಳೊಂದಿಗೆ ನೋವಿನ
ಸೆಣಸಾಟ.
ಜೀವವಿದ್ದಲ್ಲಿ ಹೋಗುವವರೆಗು ಜೀವನದೊಡನೆ
ಜಂಜಾಟ.
ಮುಗಿದಲ್ಲಿ ಕಾಲದೊಂದಿಗೆ ಸ್ನೇಹ ಸಾವಿನೊಡನೆ
ಸೆಣಸಾಟ.
ನಿಂತಲ್ಲಿಯೇ ನಿಂತೇ ಹೋಗುವುದು ಉಸುರಿನ ಓಟ.
ಇಲ್ಲಿಗೇ ಮುಗಿದು ಹೋಗುವುದು ಬಾಳಿನ ಆಟ!