*ಕುಡಿತ ಬಿಡಿ ದುಡಿತಾ ನಡಿ*
*ಕುಡಿತ ಬಿಡಿ ದುಡಿತಾ ನಡಿ*
ಗೀಗಿ ಪದ
ನಾವು ಬಂದೇವಾ ನಾವು ಬಂದೇವಾ
ನಾವು ಬಂದೇವಾ ಕುಡಿತವ ಬಿಡಿಸೋದಕ್ಕ
ಚಂದಾಗಿ ಬಾಳೋದನ್ನ ತಿಳಿಸೋದಕ್ಕ
ಅರೆ ಗೀಯ ಗೀಯ ಗಾಗಿಯ ಗೀಯ
ಹೆಂಡ್ತಿ ಮಕ್ಕ್ಳು ಉಪವಾಸ ಹಾಕಿಬಿಟ್ಟು
ಊರು ತುಂಬಾ ಸಾಲಾವಾ ಮಾಡಿಟ್ಟು
ಹೋಗಬ್ಯಾಡ ಅವರನ್ನೆಲ್ಲ ಬೀದ್ಯಾಗಿಟ್ಟು
ಅರೆ ಗೀಯ ಗೀಯ ಗಾಗಿಯ ಗೀಯ
ನಾವು ಬಂದೇವಾ ನಾವು ಬಂದೇವಾ
ನಾವು ಬಂದೇವಾ ದಾರಿ ತೋರಿಸೋದಕ್ಕ
ಸಾರಾಯಿ ಕುಡಿದು ಸಾಯಬ್ಯಾಡ ಅನ್ನುದಕ್ಕ
ಅರೆ ಗೀಯ ಗೀಯ ಗಾಗಿಯ ಗೀಯ
ಹಾದಿ ಮ್ಯಾಗಿನ ಹೆಣವಾಗಿ ಹೋಗಬ್ಯಾಡ್ರಿ
ಹೆತ್ತ ಮಕ್ಕಳಿಗ್ ನೆಲೆಯಿಲ್ಲದಂಗ್ ಮಾಡಬ್ಯಾಡ್ರಿ
ಹೆಂಡದಂಗಡಿಗ್ ಕಂತೆ ಕಂತೆ ಹಣ ಸುರಿಬ್ಯಾಡ್ರಿ
ಅರೆ ಗೀಯ ಗೀಯ ಗಾಗಿಯ ಗೀಯ
ನಾವು ಬಂದೇವಾ ನಾವು ಬಂದೇವಾ
ನಾವು ಬಂದೇವಾ ಸಂಸ್ಕಾರ ಕಲಿಸೋದಕ್ಕ
ಒಳ್ಳೇ ವಿಚಾರವನ್ನು ನಿಮಗ ಹೇಳೋದಕ್ಕ
ಅರೆ ಗೀಯ ಗೀಯ ಗಾಗಿಯ ಗೀಯ
ಪುಣ್ಯದಿ ಮಾನವ ಜನ್ಮ ಸಿಕ್ಕಾದ್ ನಮ್ಗ್
ಬಂಗಾರ ಬೆಳ್ಳಿ ಒತ್ತಿಯಿಟ್ಟು ಕುಡಿಬ್ಯಾಡ್ರಿನ್ನ
ಸತ್ತರು ಹೆಸರು ಇರೋಹಂಗ್ ಬಾಳ್ರಿ ಇನ್ನ
ಅರೆ ಗೀಯ ಗೀಯ ಗಾಗಿಯ ಗೀಯ