STORYMIRROR

Sugamma Patil

Romance Classics Others

4  

Sugamma Patil

Romance Classics Others

ಮೇಘ ಸಂದೇಶ

ಮೇಘ ಸಂದೇಶ

1 min
183


ಮೇಘ ಸಂದೇಶ ಕಳಿಸಿರುವೆನು ಗೆಳತಿ

ಮನದಿ ಅಡಗಿದ ಭಾವನೆಗೆ ಜೀವ ತುಂಬಿ

ಪ್ರೀತಿಯ ಸಮ್ಮತಿಯನು ತಿಳಿಸುವೆಯಾ

ಪ್ರೇಮದ ಮಳೆಯನು ಸುರಿಸುತಲಿ ಗೆಳತಿ


ಬಿರಿದ ಧರೆಗೆ ಮಳೆಯ ಆಗಮನವು ತಂಪು

ಬರಿದಾದ ಹೃದಯಕೆ ನಿನ್ನ ಪ್ರೀತಿಯೇ ತಂಪು

ಸುರಿದು ಬಿಡು ಒಮ್ಮೆ ದುಮ್ಮಿಕ್ಕಿ ಹನಿಯಾಗಿ 

ನನ್ನೆದೆಯಲ್ಲಿ ಒಲವಾಮೃತದ ಧಾರೆಯಾಗಿ


ತುಂಬಿ ಬಿಡು ಮನಸಿನಲ್ಲಿ ಹೂಮಳೆಯಾಗಿ

ಜೊತೆಗಿರು ಸದಾ ಸಂತೋಷದ ಸಂಗಮವಾಗಿ

ಉಕ್ಕಿ ಹರಿಯಲೆಂದೂ ಸಂಭ್ರಮದ ಹೊಳೆಯಾಗಿ

ಜೊತೆಯಾಗಿ ಸಾಗೋಣ ನಾವು ವರ್ಷಧಾರೆಯಾಗಿ


Rate this content
Log in

Similar kannada poem from Romance