ಕುರುಡು ಪ್ರೀತಿ
ಕುರುಡು ಪ್ರೀತಿ
ನಿನ್ನ ಹಿಡಿ ಪ್ರೀತಿಗಾಗಿ ಹಂಬಲಿಸಿ ಬೇಸತ್ತು
ನೊಂದಿದ್ದೆ ನಾನು
ನನ್ನನ್ನು ನನ್ನವರನ್ನು ಪ್ರೀತಿಸಲು ಸಮಯವೇ
ಕೊಡಲಿಲ್ಲ ನಾನು
ಯಾಕೆಂದರೆ ಕುರುಡು ಪ್ರೀತಿಯಲ್ಲಿ
ಮುಳುಗಿ ಬಿಟ್ಟಿದ್ದೆ ನಾನು
ನಿನ್ನ ಕನಸುಗಳ ನನಸಿಗಾಗಿಯೇ ಹಗಲಿರುಳು
ಶ್ರಮಿಸಿದ್ದೆ ನಾನು
ನನ್ನ ಕನಸುಗಳನ್ನೆಲ್ಲ ಕೈ ಬಿಟ್ಟು ನಿನಗಾಗಿಯೇ ಜೀವಿಸುತ್ತಿದ್ದೆ ನಾನು
ನನ್ನ ಕನಸುಗಳ್ಯಾವುದು ದೊಡ್ಡದೆನಿಸಲಿಲ್ಲ ನನಗೆ
ಯಾಕೆಂದರೆ ಕುರುಡು ಪ್ರೀತಿಯ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದೆ ನಾನು
ನಿನ್ನ ಕಾರ್ಯ ಸಾಧನೆಗಾಗಿ ಕೈಜೋಡಿಸುತಲಿ ಮೆಟ್ಟಿಲುಗಳಾಗಿ ನಿನ್ನ ಯಶಸ್ಸನ್ನು ಬಯಸಿದ್ದೆ ನಾನು
ಯಶಸ್ಸು ಕೀರ್ತಿ ಬಂದ ಕೂಡಲೇ ನನ್ನನ್ನು ತಿರಸ್ಕರಿಸಬಹುದೆಂದು ಊಹಿಸಿರಲಿಲ್ಲ ನಾನು
ಯಾಕೆಂದರೆ ನನ್ನೆಲ್ಲಾ ಯಶಸ್ಸು ನಿನ್ನಲ್ಲಿಯೇ ಕಂಡು
ಸಂಭ್ರಮಿಸಿದ್ದೆ ನಾನು
ಸ್ವಾರ್ಥದ ದುರಾಸೆಗೆ ಪ್ರೀತಿಯ ಮುಖವಾಡ ಧರಿಸಿ ನನ್ನೊಲವಿಗೆ ಘೋರಿ ಕಟ್ಟಿ ಮೆರೆದೆ ನೀನು
ನಿಸ್ವಾರ್ಥ ಬಾಳು ನಡೆಸಿ ಯಶಸ್ಸಿನ ಮೆಟ್ಟಿಲು ಹತ್ತಿದಾಗ ಅದರ ಹಿಂದಿರುವ ನನ್ನೊಲವಿನ ಗೆಳೆಯ ನೀನೇ ಎಂದು ನೆನಪಿಸಿಕೊಂಡು ಹೇಳಿದೆ ನಾನು
ಯಾಕೆಂದರೆ ಈ ಪ್ರೀತಿ ಕುರುಡಲ್ಲವೇನು
✍️ಸೂಗಮ್ಮ ಡಿ ಪಾಟೀಲ್
ಉತ್ನಾಳ್
