STORYMIRROR

Mahesh Talavar

Classics Inspirational Others

4  

Mahesh Talavar

Classics Inspirational Others

ನನ್ನಪ್ಪ

ನನ್ನಪ್ಪ

1 min
281

ದಟ್ಟ ಕಪ್ಪು ಕೂದಲು

ಓರೆಯಾಗಿ ಮಿಂಚುತಿಹವು

ನೋಡೊ ಮನಗಳಿಗೆ

ಹುಬ್ಬು ತಬ್ಬಿಬ್ಬುಗೊಳಿಸುತಿಹವು

ಅದೇಷ್ಟು ಚಂದ ನನ್ನಪ್ಪ.


ಗಾಂಭೀರ್ಯದ ನೋಟ

ನೀಡುತಿದೆ ನೀತಿ ಪಾಠ

ಮನವನರಳಿಸೋ

ಆ ನೀಳ ಮೈ ಮಾಟ

ಅದೇಷ್ಟು ಚಂದ ನನ್ನಪ್ಪ.


ಸದಾ ಒಪ್ಪು ಒರಣ

ಬಿಳಿ ಬಟ್ಟೆಯ ಕಿರಣ

ದೇಹದಂದಕ್ಕೆ ಸೋಕಿ

ಸಿಂಚನ ಗೈಯುತ್ತಿವೆ

ಅದೇಷ್ಟು ಚಂದ ನನ್ನಪ್ಪ.


ನಡೆದರೊಂದು ಗತ್ತು

ಕೂತರೊಂದು ಶಿಸ್ತು

ಎಲ್ಲರೊಪ್ಪುವ

ಇಂಪಾದ ಮನಸ್ಸು

ಅದೇಷ್ಟು ಚಂದ ನನ್ನಪ್ಪ.


ಆದರೇನು ಮಾಡಲಿ?

ಕಾಣದಾದೆ ನನ್ನಪ್ಪನಂದು

ಅರಿಯದಾದೆ..!

ನನಗಾಗ ಮೂರು ವರುಷವೆಂದು.

ಆದರೂ..!

ನನ್ನವ್ವನ ಮಾತಿನಲಿ

ಅದೇಷ್ಟು ಚಂದ ನನ್ನಪ್ಪ.



Rate this content
Log in

Similar kannada poem from Classics