STORYMIRROR

Mahesh Talavar

Children Stories Inspirational Others

4  

Mahesh Talavar

Children Stories Inspirational Others

B'daY ನಂದು, Celebration ಮಗಳ್ದು

B'daY ನಂದು, Celebration ಮಗಳ್ದು

1 min
1.2K

ತಿಂಗಳ ಮುಂಚೆಯೇ ಮಗಳಿಗೆ ಚಿಂತೆ

ಅಪ್ಪನ ಬರ್ತಡೆ ಎಂದು.?

ತಾಯಿಯ ಮುಂದೆ, ಸದಾ ಹಿಂದೆ ಹಿಂದೆ

ಒಂದೇ ಅರಿಕೆ, ಅಪ್ಪನ ಬರ್ತಡೆ ಎಂದು.?

ಹೇಳಿಲ್ಲ ಯಾರು ,ನೆನಪಿಸಿಲ್ಲ ಚೂರು

ಮತ್ತದೆ ಕನವರಿಕೆ,ಅಪ್ಪನ ಬರ್ತಡೆ ಎಂದು.?


"ಮಗಳೇ..!!

ಇಂದೇ ನನ್ನ ಬರ್ತಡೆ! ಅಂತಾ ಹೇಳಿದೆ ದಾಖಲೆ!

ಖುಷಿಯಾಯಿತೆನು ಉತ್ತರಕೆ?"

"ಬೇಕೆ ಬೇಕು ಕೇಕು! ಅದನ್ನ ನೀನು ಕತ್ತರಿಸಬೇಕು

ನಾನು-ನೀನು ಒಬ್ಬರಿಗೊಬ್ಬರು ತಿನ್ನಿಸಬೇಕು".


ಕೇಕು ಬಂತು, ತುಂಡರಸಿ ತಿಂದಾಯಿತು

" ಮಗಳೇ ತೃಪ್ತಿಯೇ..!!" ಉದ್ಘಾರದೊಂದಿಗೆ ವಾಲಿದೆ.


ಹೊರಗಿಹ ಮಗಳು ಒಳಗಡೆ ಬಂದು.

ವಾಲಿದ ನನಗೆ, ಮೆಲ್ಮುಖದ ಕೆನ್ನಗೆ

ಕೇಕನು ಮೆತ್ತಿ, ಸಂಭ್ರಮದಿ ಮಿಂದಳು.

ಗಹಗಹಸಿ ನಕ್ಕು ತೃಪ್ತ ಭಾವವನಿತ್ತಳು.



Rate this content
Log in